ಜಿಲ್ಲಾ ಪತಂಜಲಿ ಮಹಿಳಾ ಪ್ರಭಾರಿ ಗಾಯಿತ್ರಿ ಕೋಮಲಾಚಾರಿ ನಿಧನ

ರಾಣೇಬೆನ್ನೂರು 19: ಯೋಗ ಸಾಧಕಿ ಮತ್ತು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ನಗರದ ನಿವಾಸಿ, ಸಮಾಜ ಸೇವಕಿ  ಗಾಯಿತ್ರಿ ಕೋಮಲಾಚಾರಿ(41) ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಸಂಜೆ ನಿಧನರಾದರು. ಮೃತರು ಪತಿ ಯೋಗ ಗುರು ಹಾಗೂ ಶಹರ ಪೊಲೀಸ್ ಠಾಣೆಯ ಎಎಸ್ಐ ಕೆ.ಸಿ.ಕೋಮಲಾಚಾರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. 

ಮೃತ ಗಾಯಿತ್ರಿ ಕಳೆದ ಜೂನ್ 11 ರಂದು ಮಧ್ಯಾಹ್ನ ಮೇಡ್ಲೇರಿ ರಸ್ತೆಯಲ್ಲಿ ದ್ವೀಚಕ್ರ ವಾಹನದಲ್ಲಿ ಮಗನೊಂದಿಗೆ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕ ನಾಯಿಯೊಂದು ಅಡ್ಡ ಬಂದ ಪರಿಣಾಮ ವಾಹನದಿಂದ ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.  ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದು ವಿಧಿ ವಿಪರ್ಯಾಸವೇ ಸರಿ.

ಮೃತರ ನಿಧನಕ್ಕೆ ಭಾರತ್ ಸ್ವಾಭಿಮಾನ್ ಟ್ರಸ್ಟ್, ಜಿಲ್ಲಾ ಮತ್ತು ತಾಲೂಕಾ ಪತಂಜಲಿ ಯೋಗ ಸಮಿತಿ ಸ್ಥಳೀಯ ಈಶ್ವರಿಯ ವಿಶ್ವವಿಧ್ಯಾಲಯ, ಜೆ.ಸಿ.ಸಂಸ್ಥೆ, ರೋಟರಿ,  ಪೋಲೀಸ್ ಇಲಾಖಾಧಿಕಾರಿಗಳು, ಸ್ವಾಕರವೇ, ಅಭಿರುಚಿ ಜನಪದ ಸಂಸ್ಥೆ, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಸೇರಿದಂತೆ ಅನೇಕ ಸಂಘಟನೆಗಳು ಮತ್ತು ಗಣ್ಯಮಾನ್ಯರು ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.  

ಬುಧವಾರ ಮಧ್ಯಾಹ್ನ ಅವರ ಸ್ವಗ್ರಾಮದ  ಕಡೂರಹಳ್ಳಿಯಲ್ಲಿ ಅಪಾರ ಜನಸ್ತೋಮದ ಮಧ್ಯ ವಿಶ್ವಕರ್ಮ ವಿಧಿ-ವಿಧಾನುಸಾರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.