ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಚಕ್ಕಡಿ, ವರ್ಣಮಾಲೆಯ ಸಾಲುಗಳೊಂದಿಗೆ ವರ್ಣರಂಜಿತ ಅಕ್ಷರದ ಹಬ್ಬ

ಧಾರವಾಡ೩೧:  ಇಲ್ಲಿನ ಕೆಲಗೇರಿಯಲ್ಲಿಂದು ಊರ ಪ್ರಮುಖ ರಸ್ತೆಗಳ ತುಂಬ ಕನ್ನಡ,ಇಂಗ್ಲೀಷ್,ಉದರ್ು ವರ್ಣಮಾಲೆಗಳಿಂದ ಸಿಂಗರಿಸಲ್ಪಟ್ಟಿದ್ದ ಅಕ್ಷರ ಬಂಡಿ, ಟ್ರಾಕ್ಟರ್, ಕೊಡೆಗಳ ವರ್ಣ ರಂಜಿತ ಯಾತ್ರೆ, ಡೊಳ್ಳು ಕುಣಿತದೊಂದಿಗೆ ಮಕ್ಕಳ ಕಲರವ ಅನುರಣಿಸಿತು.  ಸಾರ್ವಜನಿಕ ಶಿಕ್ಷಣ ಇಲಾಖೆಯು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಕೆಲಗೇರಿಯ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. 

     ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಮಾತನಾಡಿ, ಮಕ್ಕಳು ಮನೆಯನ್ನು ಬಿಟ್ಟರೆ ಅಧಿಕ ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಾರೆ. ಪಾಲಕರು ಮತ್ತು ಶಿಕ್ಷಕರು ಹೆಚ್ಚು ಮುತುವಜರ್ಿ ವಹಿಸಿ ಮಕ್ಕಳ ಭವಿಷ್ಯ ರೂಪಿಸಬೇಕು. ಸುಶಿಕ್ಷಿತ ಪ್ರಜೆಗಳ ನಿಮರ್ಾಣ ನಾವು ದೇಶಕ್ಕೆ ನೀಡುವ ಅಮೂಲ್ಯ ಕೊಡುಗೆಯಾಗಿದೆ ಎಂದರು. 

      ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿ, ದುಡ್ಡು ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಗಾದೆ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಭವ್ಯ ಭಾರತದ ನಿಮರ್ಾಣಕ್ಕೆ ಗುಣಾತ್ಮಕ ಶಿಕ್ಷಣ ಅಗತ್ಯ ಎಂದರು. 

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಡಾ.ಬಿ.ಸಿ. ಸತೀಶ್ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಅರ್ಹ ಪದವಿ, ತರಬೇತಿ ಹೊಂದಿದ ಪ್ರತಿಭಾವಂತ ಶಿಕ್ಷಕರಿದ್ದಾರೆ. 

   ಸಕರ್ಾರವೂ ಕೂಡಾ ವಿದ್ಯಾಥರ್ಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ತರುವ ಕಾರ್ಯಕ್ರಮ ನಡೆಯುತ್ತಿದೆ. 

   ಕೆಲಗೇರಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿರುವುದು ಸಂತಸ ತಂದಿದೆ ಎಂದ ಅವರು ತಾವು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ದಿನಗಳನ್ನು ಮೆಲಕು ಹಾಕುತ್ತಾ ಅಂದಿನ ದಿನಗಳಲ್ಲಿ ಈಗಿನಂತೆ ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಪರಿಪಾಠ ಇರಲಿಲ್ಲ. ಓರಗೆಯ ಸ್ನೇಹಿತರೊಂದಿಗೆ ಶಾಲೆಗೆ ಹೊರಟ ನಂತರ ದಾಖಲೆ ನಡೆಯುತ್ತಿತ್ತು. ಈಗ ಶಿಕ್ಷಣಕ್ಕೆ ಉತ್ತೇಜನ ನೀಡಲು ವೈವಿಧ್ಯಮಯ ಚಟುವಟಿಕೆಗಳು ನಡೆಯುತ್ತಿವೆ. ಇವುಗಳ ಸದುಪಯೋಗ ಆಗಬೇಕು ಎಂದರು. 

       ಶಾಲಾ ವಿದ್ಯಾಥರ್ಿಗಳಿಗೆ ಇದೇ ಸಂದರ್ಭದಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಆಕರ್ಷಕ ಸಮೂಹ ನೃತ್ಯ, ಶಿಕ್ಷಕರಾದ ಎಫ್.ಬಿ. ಕಣವಿ, ವಿ.ಎನ್. ಕೀತರ್ಿವತಿ ಮತ್ತು  ಸಂಗಡಿಗರಿಂದ ಜಾಗೃತಿ ಗೀತೆಗಳು ಮೂಡಿಬಂದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಕ್ಷರ ಬಂಡಿಯ ಮೆರವಣಿಗೆ ಜರುಗಿತು. 

       ಸ್ಥಳೀಯ ಮುಖಂಡರಾದ ವಿಜಯಲಕ್ಷ್ಮಿ ಲೂತಿಮಠ, ಬಲರಾಮ ಕುಸುಗಲ್, ಬಸನಗೌಡ ಸಿದ್ಧಾಪೂರ, ಕಲ್ಲನಗೌಡ ಸಿದ್ಧಾಪೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಗಜಾನನ ಮನ್ನಿಕೇರಿ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ವಿದ್ಯಾ ನಾಡಿಗೇರ, ಶ್ರೀಶೈಲ ಕರಿಕಟ್ಟಿ, ಎಸ್.ಎಂ. ಹುಡೇದಮನಿ, ಉಪಯೋಜನಾ ಸಮನ್ವಯಾಧಿಕಾರಿ ಪ್ರಮೋದ್ ಮಹಾಲೆ, ಮುಖ್ಯೋಪಾಧ್ಯಾಯ ಎಸ್.ಬಿ. ಕೇಸರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.