ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಅತೀಸಾರ ಬೇಧಿ ಇರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಿ: ಡಾ. ಕಳಸದ

ಬೆಳಗಾವಿ, 3: ಮಗುವಿನ ಮಲದ ರೂಪದಲ್ಲಿ ಬದಲಾವಣೆಯಾದಾಗ ಹಾಗೂ ಸಾಮಾನ್ಯಕ್ಕಿಂತ ಹೆಚ್ಚು ತಿಳಿಯಾಗಿ ಅಥವಾ ನೀರಿನಂತೆ ಆಗುವ ಭೇದಿಯನ್ನು ಅತಿಸಾರ ಭೇದಿ ಎಂದು ಹೇಳಿ ಇದಕ್ಕೆ ಸುಲಭ ಪರಿಹಾರ ಓ.ಆರ್.ಎಸ್ ಮತ್ತು ಜಿಂಕ್ ಎಂದು ತಿಳಿಸಿ ಜೂ.3 ರಿಂದ 17 ರ ವರೆಗೆ ಜರಗುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಅತೀಸಾರ ಬೇಧಿ ಇರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡುವಂತೆ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿದರ್ೇಶಕರಾದ ಡಾ.ಎಸ್.ಟಿ.ಕಳಸದ ಅವರು ಕರೆ ನೀಡಿದರು.

ಜೂ.3 ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾತರ್ಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಇವರ ಸಹಯೋಗದಲ್ಲಿ  ಜಿಲ್ಲಾ ಮಟ್ಟದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ -2019 ರ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು.

ದೇಹದಲ್ಲಿ ನೀರಿನ ಕೊರತೆಯಾದಾಗ ಮಗು ಕಿರಿಕಿರಿ ಉಂಟುಮಾಡುವುದು ಅಥವಾ ತುಂಬಾ ನಿದ್ರೆಯಲ್ಲಿರುವುದು, ಮಗುವಿನ ಕಣ್ಣುಗಳು ಒಳಗೆ ಹೋಗಿರುವುದು, ಮಗುವಿಗೆ ತುಂಬಾ ಬಾಯಾರಿಕೆಯಾಗುವುದು ಮತ್ತು ಮಗುವಿನ ಹೊಟ್ಟೆಯ ಚರ್ಮವನ್ನು ಚಿವಟಿ ಎಳೆದು ಬಿಟ್ಟಾಗ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುವುದು ಇದರ ಮುಖ್ಯ ಲಕ್ಷಣಗಳೆಂದರು.      ಕೈ ತೋಳೆಯುವ ವಿಧಾನಗಳ ಬಗ್ಗೆ ತಿಳಿಸಿ ಊಟಕ್ಕೆ ಮೊದಲು ಹಾಗೂ ಶೌಚದ ನಂತರ ಸಾಬೂನಿಂದ ಕೈ ತೊಳೆಯಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳಾದ ಡಾ.ಅಪ್ಪಾಸಾಹೇಬ ನರಟ್ಟಿ ಅವರು  ಮಾತನಾಡುತ್ತ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆಯಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು. ಹಾಗೂ ನಿಯಂತ್ರಣ ಮಾಡುವದಕ್ಕಾಗಿ ಸಕರ್ಾರಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಕಾರ್ನರಗಳನ್ನು ಸ್ಥಾಪಿಸಲಾಗಿದೆ. 

ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಹಾಗೂ ಅಂಗನವಾಡಿ ಕಾರ್ಯಕರ್ತ ಯರು, ತಾಯಿಂದಿರಿಗೆ ಓ.ಆರ್.ಎಸ್ ತಯಾರಿಸುವ ವಿಧಾನ ಮತ್ತು ಅತಿಸಾರ ಭೇದಿವಿದ್ದಾಗ ಮಕ್ಕಳಿಗೆ ತಪ್ಪದೇ ದೈನಂದಿನ ಆಹಾರದ ಜೋತೆ ತಾಯಿ ಎದೆ ಹಾಲು ಉಣಿಸುವದು, ಪರಸರ ನೈರ್ಮಲ್ಯ, ಕೈ ತೊಳೆಯುವ ವಿಧಾನ ಹಾಗೂ ಶೌಚಾಲಯದ ಬಳಕೆ ಕುರಿತು ಆರೋಗ್ಯ ಶಿಕ್ಷಣ ನೀಡಿಲಿದ್ದಾರೆಂದು ತಿಳಿಸಿದರು. 

ಪ್ರಾರಂಭದಲ್ಲಿ ಡಾ.ವೆಂಕಟೇಶ ಮಗುವಿನ ಮಲದ ರೋಪದಲ್ಲಿ ಬದಲಾವಣೆಯಾದಾಗ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ತಿಳಿಯಾಗಿ ಅಥವಾ ನೀರಿನಂತೆ ಆಗುವ ಭೇದಿಯನ್ನು ಅತೀಸಾರ ಭೇದಿ ಎಂದು ಹೇಳಬಹುದು.. ಓ.ಆರ್.ಎಸ್ ಮತ್ತು ಜಿಂಕ್ ಜೋಡಿ ನಂಬರ 1 ಔಷಧಿಗಳಾಗಿದ್ದು ಅತೀಸಾರ ಭೇದಿಯಾದ ಮಕ್ಕಳಿಗೆ ತಪ್ಪದೇ ನೀಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ  ಬಿಮ್ಸ್ ಆಸ್ಪತ್ರೆ ಪ್ರಭಾರಿ ವೈದ್ಯಕೀಯ ಅಧೀಕ್ಷಕರಾದ ಡಾ.ದಂಡಗಿ, ಚಿಕ್ಕ ಮಕ್ಕಳ ವಿಭಾಗ ಮುಖ್ಯಸ್ಥರು ಡಾ.ಅರುಣ ದೇಸಾಯಿ, ಮಕ್ಕಳ ತಜ್ಞರು ಡಾ.ವಿಜಯಕುಮಾರ, ದಂತ ವಿಭಾಗ ಮುಖ್ಯಸ್ಥರು ಡಾ.ಕುಮಾರ ಸ್ವಾಮಿ, ಜಿಲ್ಲಾ ಆಸ್ಪತ್ರೆ ಶ್ರೂಷಕೀಯರ ವಿಭಾಗದ ಕಮಲಾ, ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತ ಶೈಲಾ ಪಾಟೀಲ ಪ್ರಾಥನೆಗೀತೆ ಹಾಡಿದರು. ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಪಿ ಯಲಿಗಾರ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕರು ಸಿ.ಜಿ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಕಾಶ ಹಕಾಟೆ ವಂದಿಸಿದರು.