ಬಳ್ಳಾರಿ, 16: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್(ನಬಾಡರ್್) ಸಿದ್ದಪಡಿಸಿರುವ ಸಂಭಾವ್ಯ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ರೂ.876630.34 ಲಕ್ಷ ಗುರಿ ನಿಗದಿಪಡಿಸಲಾಗಿದ್ದು, ಕೃಷಿಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್ಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
2020-21ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಿಗಾಗಿ ರೂ. ರೂ.876630.34 ಲಕ್ಷ ಗುರಿ ನಿಗದಿಪಡಿಸಲಾಗಿದೆ.ಕಳೆದ ವರ್ಷಕ್ಕೆ ಹೊಲಿಸಿದರೇ ಈ ವರ್ಷ ಗುರಿ ಶೇ.11ರಷ್ಟು ಹೆಚ್ಚಳವಾಗಿರುವುದು ವಿಶೇಷ. ಕಳೆದ ವರ್ಷ ಇಟ್ಟುಕೊಂಡಿದ್ದ ಸಂಭಾವ್ಯ ಗುರಿಯಲ್ಲಿ ಶೇ.50ರಷ್ಟು ಮಾತ್ರ ಸಾಧಿಸಲಾಗಿದೆ.
ಕೃಷಿಗೆ ಸಂಬಂಧಿಸಿದ ಬೆಳೆ ಉತ್ಪಾದನೆ, ನಿರ್ವಹಣೆ ಮತ್ತು ಮಾರುಕಟ್ಟೆಗೆ ರೂ.446537.85ಲಕ್ಷ ಹಾಗೂ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳ ಸಾಲ, ಜಲಸಂಪನ್ಮೂಲ, ಕೃಷಿ ಯಾಂತ್ರೀಕರಣ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿ ಹಾಗೂ ಇನ್ನೀತರ ಕೃಷಿ ಸಂಬಂಧತ ಚಟುವಟಿಕೆಗಳಿಗಾಗಿ ರೂ.98579.54 ಲಕ್ಷ ಸೇರಿದಂತೆ ಒಟ್ಟು ರೂ.545117.39 ಗುರಿ ನಿಗದಿಪಡಿಸಲಾಗಿದೆ.
ಉಗ್ರಾಣ, ಮಾಕರ್ೇಟ್ ಯಾಡ್ಸರ್್,ಗೋದಾಮು,ಕೋಲ್ಡ್ ಸ್ಟೋರೇಜ್ ಸೇರಿದಂತೆ ವಿವಿಧ ಸಂಗ್ರಹಣಾ ಕಟ್ಟಡಗಳ ನಿಮರ್ಾಣ, ಮಣ್ಣಿನ ಸಂರಕ್ಷಣೆ, ಭೂಸುಧಾರಣೆ, ವಾಟರ್ಶೆಡ್ ಅಭಿವೃದ್ಧಿ ಸೇರಿದಂತೆ ಕೃಷಿ ಸಂಬಂಧಿತ ಸೌಕರ್ಯಗಳವೃದ್ಧಿಗಾಗಿ ರೂ.26649.96 ಲಕ್ಷ ಸಂಭಾವ್ಯ ಗುರಿ ಹಾಕಿಕೊಳ್ಳಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಕರಣೆ, ಸಹಕಾರ ಸಂಘಗಳ ಮೂಲಕ ರೈತ ಸಮುದಾಯಕ್ಕೆ ಸಾಲಗಳ ವಿತರಣೆ ಸೇರಿದಂತೆ ಕೃಷಿ ಸಂಬಂಧಿತ ಪೂರಕ ಚಟುವಟಿಕೆಗಳಿಗಾಗಿ ರೂ.60018.68 ಲಕ್ಷ ರೂ. ಗುರಿಯೆಂದು ಅಂದಾಜಿಸಲಾಗಿದೆ. ಒಟ್ಟು ಕೃಷಿ ಹಾಗೂ ಕೃಷಿ ಸಂಬಂಧಿತ ಸೌಕರ್ಯಗಳು ಹಾಗೂ ಪೂರಕ ಚಟುವಟಿಕೆಗಳಿಗಾಗಿ ಈ ಬಾರಿ ರೂ.631786.03 ಲಕ್ಷಗಳು ಸಂಭಾವ್ಯ ಗುರಿ ನಿಗದಿಪಡಿಸಲಾಗಿದೆ.
ಸಣ್ಣ,ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಸಂಬಂಧಿಸಿದಂತೆ (ಎಂಎಸ್ಎಂಇ ಇನ್ವೆಸ್ಟ್ಮೆಂಟ್ ಕ್ರೆಡಿಟ್, ಎಂಎಸ್ಎಂಇ ವಕರ್ಿಂಗ್ ಕ್ಯಾಪಿಟಲ್) 144728 ಲಕ್ಷ ರೂ.ಗಳನ್ನು ಈ ವರ್ಷದ ಗುರಿ ನಿಗದಿಪಡಿಸಿರುವುದು ವಿಶೇಷ.
ರಫ್ತು ಸಾಲಕ್ಕಾಗಿ ರೂ.11645.00 ಲಕ್ಷ, ಶಿಕ್ಷಣಕ್ಕಾಗಿ ರೂ.11852.40ಲಕ್ಷ, ವಸತಿಗಾಗಿ ರೂ.73023.50 ಲಕ್ಷ, ನವೀಕರಿಸಬಹುದಾದ ಶಕ್ತಿಗಳಿಗಾಗಿ ರೂ.443.71ಲಕ್ಷ, ಬ್ಯಾಂಕ್ ಸಾಲ ಸೇರಿದಂತೆ ಸಾಮಾಜಿಕ ಸೌಕರ್ಯಗಳಿಗಾಗಿ ರೂ.3151.50ಲಕ್ಷ ರೂ.ಗಳ ಸಂಭಾವ್ಯಸಾಲ ಯೋಜನೆ ಸಿದ್ದಪಡಿಸಲಾಗಿದೆ ಎಂದು ನಬಾಡರ್್ ಡಿಡಿಎಂ ಅಪಣರ್ಾ ಕೊಲ್ತೆ ಅವರು ಈ ಯೋಜನೆ ಬಿಡುಗಡೆ ಮಾಡಿದ ನಂತರ ವಿವರಿಸಿದರು.
ಲೀಡ್ಬ್ಯಾಂಕ್ ಮ್ಯಾನೇಜರ್ ವೆಂಕಟೇಶ್ವರರಾವ್, ಜಿಪಂ ಉಪಕಾರ್ಯದಶರ್ಿ ಶರಣಪ್ಪ ಸೇರಿದಂತೆ ವಿವಿಧ ಬ್ಯಾಂಕ್ಗಳ ಮ್ಯಾನೇಜರ್ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.