ಉಗ್ರರ ದಾಳಿಯಲ್ಲಿ ಮೃತ ಪಟ್ಟವರ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಯಿಂದ ಶ್ರದ್ಧಾಂಜಲಿ ಸಲ್ಲಿಕೆ
ಕೊಪ್ಪಳ 27: ಕಾಶ್ಮೀರದ ಪಹಲ್ ಗಾಮ್ ದಲ್ಲಿ ಜರುಗಿದ ಭಯೋತ್ಪಾದಕರ ಕೃತ್ಯದಲ್ಲಿ ಮಡಿದ ವರ ಬಗ್ಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಭಯೋತ್ಪಾದಕರ ಕೃತ್ಯವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ,, ಕಾಶ್ಮೀರ್ ವಿಚಾರದಲ್ಲಿ ರಾಜಕಾರಣ ಬೇಡ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು, ಭಯೋತ್ಪಾದನಾ ವಿಷಯದಲ್ಲಿ ಯಾರು ರಾಜಕಾರಣ ಮಾಡದೆ ಇಂಥ ಕೃತ್ಯವನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕಾಗಿದೆ ಇದನ್ನು ಮೊಟ್ಟ ಹಾಕಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದ ಆವರು ಇಂತಹ ದುರಂತದಲ್ಲಿ ಅಮಾಯಕ ಜನರು ತನ್ನ ಜೀವ ಕಳೆದುಕೊಂಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಅವರು ಪ್ರಾರ್ಥಿಸಿದ್ದಾರೆ,
ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅಮ್ಜದ್ ಪಟೇಲ್ ಮಾತನಾಡಿ ಭಯೋತ್ಪಾದನೆ ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಇಂತಹ ಭಯೋತ್ಪಾದನಾ ಕೃತ್ಯವನ್ನು ಯಾರು ಸಹಿಸುವದಿಲ್ಲ ಇದರಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ನಮ್ಮೆಲ್ಲರಿಗೆ ತೀವ್ರ ಆತಂಕ ಉಂಟಾಗಿದೆ ಅವರೆಲ್ಲರಿಗೆ ಶ್ರದ್ಧಾಂಜಲಿ ಮತ್ತು ಗೌರವ ನಮನ ಸಲ್ಲಿಸಲಾಗುವುದು ಎಂದರುಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ,ಗುರುರಾಜ್ ಹಲಗೇರಿ ಕಾಂಗ್ರೆಸ್ ವಕ್ತಾರ ಕೃಷ್ಣ ಇಟ್ಟಂಗಿ, ಜ್ಯೋತಿ ಗೊಂಡಬಾಳ ಆಶ್ರಯ ಕಮಿಟಿ ಮಾಜಿ ಸದಸ್ಯ ಜಹೀರ್ ಅಲ್ಲಿ ,ಅಲ್ಲದೆ ಕೊಪ್ಪಳ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ ಆಸಿಫ್ ಕರ್ಕಿಹಳ್ಳಿ ,ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು ನಗರದ ಅಶೋಕ್ ಸರ್ಕಲ್ ಬಳಿ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿ ಮೇಣಬತ್ತಿ ಬೆಳಗಿಸಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.