ಬಾಗಲಕೋಟೆ: ಬಾಗಲಕೋಟೆ ಹಳೆಯ ಹಾಗೂ ನವನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಹೆರಕಲ್ ಯೋಜನೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬೀಳಗಿ ತಾಲೂಕಿನ ಹೆರಕಲ್ ಸಮೀಪದ ಕೃಷ್ಣೆಯ ಹಿನ್ನೀರಿನಿಂದ ಬಾಗಲಕೋಟೆಯ ಹಳೆಯ ನಗರ ಮತ್ತು ನವನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಬರುವಲ್ಲಿ ಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಈ ಇಲಾಖೆಗಳಿಗೆ ಸಮರ್ಪಕವಾದ ಹಾಗೂ ಆಯಾ ಇಲಾಖೆಗಳ ಮಾರ್ಗಸೂಚಿಗಳಂತೆ ಯೋಜನೆ ಅನುಷ್ಠಾನಕ್ಕೆ ಅಡೆತಡೆಯುಂಟಾಗಿರುವದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಈ ಮೂರು ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ವಿವರ ಪಡೆದರು.
ಅರಣ್ಯ ಇಲಾಖೆಯ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಬಸವರಾಜಯ್ಯ ಕೂಡಾ ಹಾಜರಿದ್ದು, ತಮ್ಮ ಇಲಾಖೆಯಿಂದ ಈ ಯೋಜನೆಗೆ ಸಂಬಂಧಿಸಿದಂತೆ 5 ಮೀಟರ ಅಗಲ, 1860 ಮೀಟರ ಉದ್ದದ ರಸ್ತೆ ಕಾಮಗಾರಿಗೆ ಈಗಾಗಲೇ ಅನುಮತಿ ದೊರೆತಿದ್ದು, ಹೆಚ್ಚುವರಿ ರಸ್ತೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೂಡಲೇ ಆ ಕಾರ್ಯವನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಉತ್ತಮ ಗುಣಮಟ್ಟದ ಕಾರ್ಯ ನಿರ್ವಹಿಸುವದರ ಜೊತೆಗೆ ನಿಗದಿತ ಅವದಿಗಿಂತ ಪೂರ್ವದಲ್ಲಿಯೇ ಕಾರ್ಯ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲಾಗುವುದು. ಹೆಸ್ಕಾಂ ಹಾಗೂ ಬಿಟಿಡಿಎ ಸೇರಿದಂತೆ ವಾಟ್ಸ್ಆಪ್ ಗ್ರೂಪ್ ಮಾಡಲಾಗಿದ್ದು, ಪ್ರತಿದಿನ ಪ್ರಗತಿಯ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಭೇಟಿ ಸಮಯದಲ್ಲಿ ಹೆಸ್ಕಾಂನ ಕಾರ್ಯನಿವರ್ಾಹಕ ಅಭಿಯಂತರ ಆನಂದ ಕೇಸನೂರ, ಹೆಸ್ಕಾಂ ಕಾರ್ಯನಿವರ್ಾಹಕ ಅಭಿಯಂತರರಾದ ಆರ್.ಐ.ಉಪ್ಪಲದಿನ್ನಿ, ಮಲ್ಲಿಕಾಜರ್ುನ ಯಳಸಂಗಿಮಠ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೇಗಿನಾಳ, ಸುರೇಶ ತೇಲಿ, ಹನಮಂತ ಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.