ಹಾವೇರಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ.ಕಿಸಾನ್) ಯಡಿ ಜಿಲ್ಲೆಯ ರೈತರ ನೊಂದಣಿ ಪ್ರಕ್ರಿಯೆ ಅಭಿಯಾನದ ಮಾದರಿಯಲ್ಲಿ ಕೈಗೊಂಡು ಹತ್ತು ದಿನದೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ ನೋಂದಣಿ ಕುರಿತಂತೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು ಇಂದಿನಿಂದಲೇ ರೈತರಿಂದ ದಾಖಲೆಗಳನ್ನು ಪಡೆಯಬೇಕು. ಯುದ್ದೋಪಾದಿಯಲ್ಲಿ ಕಾರ್ಯಕೈಗೊಂಡು ಕಾಲಮಿತಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.
ಕೇಂದ್ರ ಸಕರ್ಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ವಾರ್ಷಿಕ 6000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆ ಇದಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ ರೈತರ ಖಾತೆಗೆ ಹಣ ಜಮಾವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರಿಗೆ ತ್ವರಿತವಾಗಿ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಮಾಹಿತಿ ಸಂಗ್ರಹ ಹಾಗೂ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾ.ಪಂ. ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಒಳಗೊಂಡಂತೆ ಗ್ರಾಮ ಹಂತದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪ್ರತಿ ಅಧಿಕಾರಿಗಳಿಗೆ ಪ್ರತಿ ದಿನಕ್ಕೆ ಇಂತಿಷ್ಟು ದಾಖಲೆ ಸಂಗ್ರಹ ಹಾಗೂ ನೋಂದಣಿ ಗುರಿ ನಿಗಧಿಪಡಿಸಬೇಕು. ಈ ಕುರಿತಂತೆ ತಾಲೂಕಾವಾರು ಸಭೆ ನಡೆಸಿ ನೋಂದಣಿ ಪ್ರಕ್ರಿಯೆಗೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರಗಳಿಗೆ ಸೂಚಿಸಿದರು.
ಡಿಸೆಂಬರ್ 2018ರಲ್ಲಿ ಪಿಎಂ ಕಿಸಾನ್ ಯೋಜನೆ ಘೋಷಣೆಯಾಗಿದ್ದು, ಇದೀಗ ಪರಿಷ್ಕರಿಸಿ ಕೃಷಿ ಸಾಗುವಳಿ ಭೂಮಿ ಹೊಂದಿದ ಸಣ್ಣ ಅತೀ ಸಣ್ಣ ರೈತರು ಒಳಗೊಂಡಂತೆ ಎಲ್ಲ ರೈತರಿಗೂ ಸೌಲಭ್ಯ ವಿಸ್ತರಿಸಿ ಜೂನ್ 2019 ರಂದು ಭಾರತ ಸರ್ಕಾರದ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಸಾಗುವಳಿದಾರರು ಒಳಗೊಂಡಂತೆ ಹಾವೇರಿ ಜಿಲ್ಲೆಯಲ್ಲಿ ಅಂದಾಜು 2.40 ಲಕ್ಷ ಹಿಡುವಳಿದಾರರು ಇದ್ದಾರೆ. ಸಾಗುವಳಿ ಭೂಮಿ ಜಂಟಿ ಮಾಲೀಕ್ವತ ಹೊಂದಿ ಪ್ರತಿಯೊಬ್ಬರಿಗೂ ಸಮನವಾಗಿ ಭೂಮಿ ಹಂಚಿಕೆಯಾದರೆ ಈ ಯೋಜನೆ ವ್ಯಾಪ್ತಿಗೆ ನೋಂದಾಯಿಸಲಾಗುವುದು. ಆದರೆ ಭೂಮಿಯ ಮಾಲೀಕತ್ವ ಹಂಚಿಕೆಯಾಗದಿದ್ದರೆ ಅಥವಾ ಭೂ ಮಾಲೀಕರು ಮೃತರಾಗಿದ್ದು ಉತ್ತರಾಧಿಕಾರಿಗಳಿಗೆ ಭೂಮಿ ದಾಖಲೆ ವರ್ಗವಣೆಯಾಗದಿದ್ದರೆ ಸದರಿ ಭೂಮಿ ವರ್ಗವಣೆಯಾಗುವವರೆಗೂ ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರರಿವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.
ರೈತರ ನೋಂದಣಿ ಕಾರ್ಯವನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅಟಲ್ಜಿ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ ಮಟದಲ್ಲಿ ಬಾಪೂಜಿ ಸೇವಾ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ತಂತ್ರಾಂಶ ನಿರ್ವಹಣೆಗೆ ಲಾಗಿನ್ ಆಗಲು ಯುಜರ್ ಐಡಿ ಹಾಗೂ ಪಾಸ್ವಡರ್್ಗಳನ್ನು ನೀಡಲಾಗಿದೆ. ಯಾರಿಗೆ ಅಧಿಕಾರ ನೀಡಲಾಗಿದೆಯೋ ಆ ಅಧಿಕಾರಿಗಳು ಕಡ್ಡಾಯವಾಗಿ ರೈತರಿಂದ ಮಾಹಿತಿ ಪಡೆದು ಸಮರೋಪಾದಿಯಲ್ಲಿ ಈಖಗಖಿಖ ಕಒ-ಏಚಿಟಿ ಕಠಡಿಣಚಿಟ ನಲ್ಲಿ ನಮೂದು ಮಾಡಲು ಸೂಚನೆ ನೀಡಿದರು.
ಅನುಬಂಧದ ಪ್ರಕಾರ ರೈತರಿಂದ ಸ್ವಯಂ ಘೋಷಣೆ ಪಡೆಯಬೇಕು. ಅರ್ಜಿದಾರರ ಹೆಸರು, ಗುರುತಾರರ ಹೆಸರು, ಲಿಂಗ, ವಯಸ್ಸು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಾಸ್ತವ್ಯ ವಿಳಾಸ, ವರ್ಗ, ಬ್ಯಾಂಕ್ ಖಾತೆ, ಐ.ಎಸ್.ಎಫ್.ಸಿ.ಕೋಡ್ಗಳನ್ನು ಪಡೆಯಬೇಕು ಹಾಗೂ ಸಾಗುವಳಿ ಖಾತೆಯ ಸಂಖ್ಯೆಯೊಂದಿಗೆ ದಾಖಲಿಸಬೇಕು ಹಾಗೂ ಫಲಾನುಭವಿಗಳಿಂದ ಯಾವುದೇ ಸಂವಿಧಾನಿಕ ಹುದ್ದೆ ಹೊಂದಿಲ್ಲ, ಸಕರ್ಾರಿ ಹುದ್ದೆ ಹೊಂದಿಲ್ಲ, ತೆರಿಗೆ ಪಾವತಿಸುವುದಿಲ್ಲ ಎಂಬ ಸ್ವಯಂ ಘೋಷಣೆಯ ದೃಢೀಕರಣ ಪಡೆಯಬೇಕು. ಈ ಕುರಿತಂತೆ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ, ಕೃಷಿ ಸಹಾಯಕರಿಗೆ ಅಥವಾ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತ್ವರಿತವಾಗಿ ಒದಗಿಸುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಕೃಷಿ ಜಂಟಿ ನಿದರ್ೆಶಕ ಮಂಜುನಾಥ್, ತೋಟಗಾರಿಕೆ ಉಪನಿದರ್ೆಶಕ ಶರಣಪ್ಪ ಭೋಗಿ, ಕೃಷಿ ಉಪನಿದರ್ೆಶಕ ಹುಲಿರಾಜ ಹಾಗೂ ವಿವಿಧ ತಾಲೂಕಿನ ತಹಶೀಲ್ದಾರಗಳು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.