ಬಾಕಿ ಪಾವತಿಸಲು ಕಾಖರ್ಾನೆಗಳಿಗೆ ಜಿಲ್ಲಾಧಿಕಾರಿ ಸೂಚನೆ District Collector instructs factories to pay dues
Lokadrshan Daily
12/16/24, 10:41 PM ಪ್ರಕಟಿಸಲಾಗಿದೆ
ಕಬ್ಬಿನ ಬಿಲ್ ಬಾಕಿ: ರೈತ ಮುಖಂಡರ ಸಭೆ * ಮಹಾರಾಷ್ಟ್ರ ಮಾದರಿ ದರ ನಿಗದಿ * ಉಪ ಉತ್ಪನ್ನಗಳ ಲಾಭಾಂಶ ನೀಡಲು ರೈತರ ಒತ್ತಾಯ
ಬೆಳಗಾವಿ, 14: ಸಕರ್ಾರ ಪ್ರಕಟಿಸಿರುವ ಎಫ್ಆರ್ ಪಿ ದರ ಕಡ್ಡಾಯವಾಗಿ ನೀಡಬೇಕು; ಸಕ್ಕರೆ ಕಾಖರ್ಾನೆಗಳು ಕಳೆದ ಬಾರಿ ತಾವೇ ಘೋಷಿಸಿದ ದರದ ಪ್ರಕಾರ ಬಿಲ್ ಪಾವತಿಸದೇ ಕಡಿಮೆ ಹಣ ಪಾವತಿಸಿರುವ ಪ್ರಕರಣಗಳಲ್ಲಿ ತಕ್ಷಣ ಬಾಕಿ ಬಿಲ್ ಪಾವತಿಸಲು ಕಾಖರ್ಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ನ.14) ನಡೆದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಫ್ ಆರ್ ಪಿ ದರ ನೀಡುವಂತೆ ಈಗಾಗಲೇ ಎಲ್ಲ ಕಾಖರ್ಾನೆಗಳಿಗೆ ಲಿಖಿತವಾಗಿ ಸೂಚನೆ ನೀಡಲಾಗಿದೆ. ಇದಲ್ಲದೇ ಸಕರ್ಾರದ ಆದೇಶದ ಪ್ರಕಾರ 14 ದಿನಗಳಲ್ಲಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.
ಅದೇ ರೀತಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ಮಾದರಿಯಲ್ಲಿ ದರ ನಿಗದಿಗೆ ಸಕರ್ಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತ ಮುಖಂಡ ರವಿ ಸಿದ್ದಪ್ಪ ಗಾಣಿಗೇರ ಮಾತನಾಡಿ ಎಫ್ಆರ್ ಪಿ ದರ ಎನ್ನದೇ ಮಹಾರಾಷ್ಟ್ರ ಮಾದರಿಯಲ್ಲಿ ದರ ನಿಗದಿಪಡಿಸಬೇಕು. ಅಲ್ಲಿನ ಕಾಖರ್ಾನೆಗಳು ಪ್ರತಿ ಟನ್ ಗೆ ಮೂರು ಸಾವಿರ ರೂಪಾಯಿ ಮೇಲ್ಪಟ್ಟು ದರ ನೀಡುತ್ತಿರುವಾಗ ಇಲ್ಲೇಕೆ ಅಸಾಧ್ಯ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಮಾದರಿಯಲ್ಲೇ ದರ ನಿಗದಿಗೆ ಸಕರ್ಾರ ಕ್ರಮ ಕೈಗೊಳ್ಳಬೇಕು ಹಾಗೂ ಕಾಖರ್ಾನೆಗಳು ಬಾಕಿ ಉಳಿಸಿಕೊಂಡಿರುವ ಬಿಲ್ ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಶಶಿಕಾಂತ ಜೋಶಿ, ಜಿಲ್ಲೆಯ ಕಾಖರ್ಾನೆಗಳು ತಾವೇ ನಿಗದಿಪಡಿಸಿದ ದರ ನೀಡದೇ ಹಾಗೂ ಸಕಾಲಕ್ಕೆ ಪೂರ್ಣ ಪ್ರಮಾಣದ ಬಿಲ್ ಪಾವತಿಸದೇ ಒಟ್ಟಾರೆ 154 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ನುರಿಸಿದ 14 ದಿನಗಳಲ್ಲಿ ಬಿಲ್ ಪಾವತಿಸಬೇಕು ಎಂದು ಸಕರ್ಾರದ ಆದೇಶವಿದ್ದರೂ ಆರೇಳು ತಿಂಗಳಾದರೂ ಕಾಖರ್ಾನೆಗಳು ಬಿಲ್ ಪಾವತಿಸಿಲ್ಲ; ತಮ್ಮದೇ ಕೋ-ಆಪ್ ಬ್ಯಾಂಕ್ ಸ್ಥಾಪಿಸಿ ಅಲ್ಲೂ ಸಾಲದ ನೆಪದಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂದು ಹೇಳಿದರು.
ಮನಬಂದಂತೆ ದರ ನಿಗದಿಪಡಿಸುವ ಕಾಖರ್ಾನೆಗಳು, ಕಬ್ಬು ಪೂರೈಕೆ ಕಡಿಮೆಯಾಗುತ್ತಿದ್ದಂತೆ ದರ ಏರಿಳಿಕೆ ಮಾಡುತ್ತ ರೈತರನ್ನು ಗೊಂದಲಕ್ಕೀಡು ಮಾಡುತ್ತಿವೆ. ಇದರ ಬದಲು ಸಕರ್ಾರದ ಆದೇಶದ ಪ್ರಕಾರ ದರ ನಿಗದಿಪಡಿಸಿ, ಎಲ್ಲರಿಗೂ ಒಂದೇ ರೀತಿ ಬಿಲ್ ಪಾವತಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಸಕ್ಕರೆ ಮುಟ್ಟುಗೋಲು; ಹರಾಜಿಗೆ ಕ್ರಮ-ಡಿಸಿ:
12 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಮಲಪ್ರಭಾ ಸಕ್ಕರೆ ಕಾಖರ್ಾನೆ ಸಕ್ಕರೆ ಮತ್ತು ಮೊಲ್ಯಾಸಿಸ್ ಮುಟ್ಟುಗೋಲು ಮಾಡಲಾಗಿದೆ.
ಸಕ್ಕರೆ ಮಾರಾಟಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿತ್ತು. ಯಾರೂ ಭಾಗವಹಿಸಿಲ್ಲ; ಇದೀಗ ಎರಡನೇ ಬಾರಿ ಟೆಂಡರ್ ಕರೆಯಲಾಗಿದ್ದು, ನವೆಂಬರ್ 13 ಕಡೆಯ ದಿನವಾಗಿತ್ತು. ಆದಷ್ಟು ಬೇಗನೇ ಕಬ್ಬು ಮಾರಾಟಕ್ಕೆ ಕ್ರಮ ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟನೆ ನೀಡಿದರು.
ಎರಡನೇ ಬಾರಿ ಯಾರೂ ಟೆಂಡರ್ ನಲ್ಲಿ ಭಾಗವಹಿಸದಿದ್ದರೆ ಸಕರ್ಾರದಿಂದ ಅನುಮತಿ ಪಡೆದು ಬಹಿರಂಗ ಹರಾಜಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
2013-14 ನೇ ಸಾಲಿನ ಸೌಭಾಗ್ಯಲಕ್ಷ್ಮೀ ಕಾಖರ್ಾನೆ ಬಿಲ್ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ಪದೇ ಪದೇ ರೈತರು ಮನವಿ ಮಾಡಿಕೊಂಡರೂ ಇದುವರೆಗೆ ಬಾಕಿ ಬಿಲ್ ಪಾವತಿಸಲು ಜಿಲ್ಲಾಡಳಿತ ವಿಫಲ ಎಂದು ರೈತ ಮುಖಂಡರಾದ ಜಯಶ್ರೀ ಆರೋಪಿಸಿದರು.
ಸಂಜಯ ನಾಡಗೌಡ ಮಾತನಾಡಿ, ಸಕ್ಕರೆ ಕಾಖರ್ಾನೆಗಳು ಉಪ ಉತ್ಪನ್ನಗಳ ಲಾಭದ ಬಗ್ಗೆ ಮಾತನಾಡದೇ ಕೇವಲ ಸಕ್ಕರೆ ದರದ ಏರಿಳಿತ ಹಾಗೂ ಮಾರುಕಟ್ಟೆ ಬೇಡಿಕೆಯ ನೆಪ ಹೇಳಿ ಕಬ್ಬಿಗೆ ಸೂಕ್ತ ದರ ನಿಗದಿಪಡಿಸುತ್ತಿಲ್ಲ ಎಂದು ವಿವರಿಸಿದರು.
ಗುಜರಾತ್ ನಲ್ಲಿ ಪ್ರತಿ ಟನ್ ಗೆ 4700 ರೂಪಾಯಿ, ಮಹಾರಾಷ್ಟ್ರದಲ್ಲಿ ಕನಿಷ್ಠ 2800 ದರದ ಪ್ರಕಾರ ಬಿಲ್ ಪಾವತಿಸುತ್ತಾರೆ. ಕಾಖರ್ಾನೆಗಳ ಉಪ ಉತ್ಪನ್ನಗಳ ಮೇಲೆ ಹಾಗೂ ಎಥೆನಾಲ್ ಬಗ್ಗೆ ನಿಗಾ ವಹಿಸಬೇಕು. ಉಪ ಉತ್ಪಾದನೆಯ ಶೇ.30 ರೈತರಿಗೆ ನೀಡಬೇಕು; ಅದನ್ನು ನೀಡುತ್ತಿಲ್ಲ ಎಂದು ನಾಡಗೌಡ ದೂರಿದರು.
ಬಸವರಾಜ ನಾಗಠಾಣ ಮಾತನಾಡಿ 2017-18 ನೇ ಸಾಲಿನಲ್ಲಿ ಹಿರಣ್ಯಕೇಶಿ ಮತ್ತು ವಿಶ್ವರಾಜ್ ಕಾಖರ್ಾನೆಗಳು ಪ್ರತಿ ಟನ್ ಗೆ 3000 ದರ ನಿಗದಿಪಡಿಸಿದ್ದರು. ಆರಂಭದಲ್ಲಿ ನಿಗದಿತ ದರ ಪಾವತಿ ನಂತರ 2500 ರಂತೆ ಬಿಲ್ ಪಾವತಿಸಿದ್ದಾರೆ ಉಳಿದ ಬಾಕಿ ಹಣ ಪಾವತಿಸಿಲ್ಲ ಎಂದು ಹೇಳಿದರು.
ಕೇಂದ್ರ ಸಕರ್ಾರ ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆಯನ್ನು ಕಾಖರ್ಾನೆಗಳು ನೀಡುತ್ತಿಲ್ಲ ಎಂದರು.
ಜಿಲ್ಲೆಯ ಎಲ್ಲ ಕಾಖರ್ಾನೆಗಳು ಏಕರೂಪ ದರ ನಿಗದಿಗೆ ಸಾಧ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ನಾಗಠಾಣ ಸಲಹೆ ನೀಡಿದರು.
ದರ ನಿಗದಿ ತಾರತಮ್ಯ ಮತ್ತು ಬಿಲ್ ಪಾವತಿಯಲ್ಲಿ ಕಾಖರ್ಾನೆಗಳ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಬಾಕಿ ಪಾವತಿಸುವವರೆಗೆ ಕಾಖರ್ಾನೆಗಳನ್ನು ಬಂದ್ ಮಾಡಿಸಬೇಕು ಎಂದು ರೈತರ ಒತ್ತಾಯಿಸಿದರು.
ಪ್ರೋಬೇಷನರಿ ಐಎಎಸ್ ಅಧಿಕಾರಿ ಭವಾನಿಸಿಂಗ್ ಮೀನಾ, ಉಪ ಪೊಲೀಸ್ ಆಯುಕ್ತ ನಂದಗಾವಿ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿದರ್ೇಶಕ ಖಂಡಗಾವಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.