ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಯಶಸ್ವಿ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ

District Collector instructions for successful organization of State Government Employees' Games

ಗದಗ 13:  ಇದೇ ಮಾರ್ಚ್‌ 8 ಮತ್ತು 9 ರಂದು ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆ0ುಲಿದ್ದು, ಇದನ್ನು 0ುಶಸ್ವಿ0ಾಗಿ ಆ0ೋಜಿಸಲು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಅವರು ಸೂಚನೆ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಆ0ೋಜನೆ ಕುರಿತಂತೆ ಜರುಗಿದ ಪೂರ್ವ ಸಿದ್ಧತಾ ಸಭೆ0ು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನೌಕರರೆಲ್ಲರೂ ಈ ಕ್ರೀಡಾಕೂಟದಲ್ಲಿ ಸಕ್ರಿ0ುವಾಗಿ ಭಾಗವಹಿಸಿ ತಮ್ಮ ಕ್ರೀಡಾ ಸ್ಪೂರ್ತಿ0ುನ್ನು ಮೆರೆ0ುಬೇಕು. ಈ ಮೂಲಕ ಆರೋಗ್ಯ ವೃದ್ಧಿ0ಾಗುವುದಲ್ಲದೆ, ಸರ್ಕಾರೀ ನೌಕರರಲ್ಲಿ ಒಗ್ಗಟ್ಟಿನ ಮನೋಭಾವವೂ ಹೆಚ್ಚಳವಾಗುತ್ತದೆ ಎಂದು ಅವರು ಅಭಿಪ್ರಾ0ುಪಟ್ಟಿದ್ದಾರೆ.ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ, ಸಂಜೆ ವೇಳೆ ಸಾಂಸ್ಕೃತಿಕ ಕಾ0ುರ್ಕ್ರಮಗಳನ್ನೂ ಆ0ೋಜಿಸಲಾಗಿದ್ದು, ಇದು ನೌಕರರ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸಲಿ ಎಂದರು.ಈ ಕ್ರೀಡಾಕೂಟ 0ುಶಸ್ವಿ0ಾಗಿ ನಡೆ0ುಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

ಕ್ರೀಡಾಕೂಟ ಆ0ೋಜನೆ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಅಗತ್ಯದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಚ್ಚುಕಟ್ಟಾಗಿ ಕ್ರೀಡಾಕೂಟ ಜರಗುವಂತೆ ನಿಗಾ ವಹಿಸಲು ಸೂಚಿಸಿದರು.ಮಾರ್ಚ್‌ 8 ಹಾಗೂ 9ರಂದು ಕ್ರೀಡಾಕೂಟ ಆ0ೋಜಿಸಿ ಅಚ್ಚುಕಟ್ಟಾಗಿ ಅತಿಥಿಗಳಿಗೆ ಆಹ್ವಾನಿಸಿ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿ ಮೂಲಕ ಗಮನ ಸೆಳೆ0ುುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಹೇಳಿದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿ0ು ಉಪಾಧ್ಯಕ್ಷ ರವಿ ಗುಂಜಿಕರ ಮಾತನಾಡಿ, ಗದಗ ಜಿಲ್ಲೆ0ುಲ್ಲಿ ಆ0ೋಜಿಸುವ ನೌಕರರ ಕ್ರೀಡಾಕೂಟವು ಎಲ್ಲರಿಗೂ ನೆನಪಿಡುವಂತಾಗಬೇಕು. ಉತ್ತಮ ಆ0ೋಜನೆ0ು ಮೂಲಕ ನೌಕರರಲ್ಲಿ ಅಡಗಿರುವ ಪ್ರತಿಭೆ0ು ಅನಾವರಣಕ್ಕೆ ವೇದಿಕೆ0ಾಗಬೇಕು. ಆ ಮೂಲಕ ಗದಗ ಜಿಲ್ಲೆ0ು ಸರ್ಕಾರಿ ನೌಕರರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಈ ಕ್ರೀಡಾಕೂಟ ಸಹಕಾರಿ0ಾಗಲಿ ಎಂದರು.ಕ್ರೀಡಾ ಇಲಾಖೆ ಸಹಾ0ುಕ ನಿರ್ದೇಶಕ ಶರಣು ಗೋಗೇರಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಗದಿಪಡಿಸಿದ ವೆಬ್ಸೈಟ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.  

ಸಭೆ0ುಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಬಿ ಸಂಕದ, ಉಪ ವಿಭಾಗಾಧಿಕಾರಿ ಗಂಗಪ್ಪ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು