ಉದ್ಯಮಶೀಲತೆ ಅಭಿವೃದ್ಧಿ ಯೋಜನೆ-3 ಸರಕಾರಿ ಸಾಂಸ್ಥಿಕ ಕೋಟಾದಡಿ ದ್ವಿಚಕ್ರ ವಾಹನ ವಿತರಣೆ

Distribution of two-wheelers under government institutional quota

ವಿಜಯಪುರ 22: ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 2022-23ನೇ ವರ್ಷದ ಉದ್ಯಮಶೀಲತೆ ಅಭಿವೃದ್ಧಿ ಯೋಜನೆ-3(ದ್ವಿಚಕ್ರ ವಾಹನ) ಸರಕಾರಿ ಸಾಂಸ್ಥಿಕ ಕೋಟಾದಡಿ ಆಯ್ಕೆಯಾದ ಫಲಾಪೇಕ್ಷಿಗಳಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ದ್ವಿಚಕ್ರ ವಾಹನ ವಿತರಿಸಿದರು. 

ನಗರದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಬಲೇಶ್ವರದ ಆರು ಜನರಿಗೆ ಶಾಸಕರು ದ್ವಿಚಕ್ರ ವಾಹನ ವಿತರಿಸಿ ಶುಭ ಕೋರಿದರು. 

ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ. ಜೆ. ಇಂಡಿ, ತಾಲೂಕು ಅಭಿವೃದ್ಧಿ ಅಧಿಕಾರಿ ಪದ್ಮಜಾ  

ಪಾಟೀಲ, ಸಚಿವ ಎಂ. ಬಿ. ಪಾಟೀಲ ಅವರ ಆಪ್ತ ಸಹಾಯಕ ಡಿ. ಎನ್‌. ಭೋಸಲೆ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಪರಸು ಪಡಗಾರ, ವಿಶ್ವಾಸ ಕಾಂಬಳೆ, ಸಿದಗೊಂಡ ರುದ್ರಗೌಡರ, ಸಿದ್ದು ಮಾದರ, ದಾನಪ್ಪ ಹೊಸಮನಿ, ಚಂದ್ರಶೇಖರ ದೊಡಮನಿ, ಜಕ್ಕಪ್ಪ ಹಲಗಿ, ಯಲ್ಲಪ್ಪ ದೊಡಮನಿ, ಶಾಂತಪ್ಪ ಹಲಗಿ ಮುಂತಾದವರು ಉಪಸ್ಥಿತರಿದ್ದರು.