ಲೋಕದರ್ಶನ ವರದಿ
ಬೆಳಗಾವಿ 10: ದಿ. 10ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ಕ್ಷೇತ್ರದ ಮೂರು ಫಲಾನುಭವಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿಯಲ್ಲಿ ಸಹಾಯದನದ ಚೆಕ್ಕನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚಿಕ್ ವಿತರಿಸಿ ಮಾತನಾಡಿದ ಶಾಸಕರು ನನ್ನ ಮತಕ್ಷೇತ್ರದವರಾದ ತಾರಾಮತಿ ಗಜಾನಂದ ಗುಜರ್ಾರ, ಉಮಾ ಗಣಪತ ಪಾಟೀಲ ಹಾಗೂ ಶ್ರೀ. ನಲು ಬಳವಂತ ಬಡಗಾವಿ ಇವರು ಅತ್ಯಂತ ಬಡ ಕುಟುಂಬದವರಾಗಿರುವ ಇವರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ನಮ್ಮ ಮನವಿಗೆ ತ್ವರಿತಗತಿಯಲ್ಲಿ ಸಹಕರಿಸಿ ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಶಸ್ತ್ರ ಚಿಕಿತ್ಸೆಯ ಸಹಾಯಧನಕ್ಕಾಗಿ ರಾಜ್ಯ ಸಕರ್ಾರದ ವತಿಯಿಂದ ಸಹಾಯಧನವನ್ನು ನೀಡಲಾಗಿದೆ. ಕಾರಣ ಆ ಫಲಾನುಭವಿಗಳ ಕುಟುಂಬದವರಿಗೆ ಇಂದು ಚೆಕ್ನ್ನು ವಿತರಿಸಲಾಗುತ್ತಿದೆ ಎಂದ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದವನ್ನು ಸಲ್ಲಿಸಿದರು ಹಾಗೂ ಬಡ ಜನತೆಯು ಮಾರಣಾಂತಿಕ ಖಾಯಿಲೆಗಳಿಗೆ ಅಂಜದೆ ಕೇಂದ್ರ ಹಾಗೂ ರಾಜ್ಯ ಸಕರ್ಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ತಾರಾಮತಿ ಗುಜರ್ಾರ, ದಾಮೋದರ ಗುಜರ್ಾರ, ಬಾಳು ಬಡಗಾವಿ, ಪ್ರಕಾಶ ಪಾಟೀಲ, ಶಾಸಕರ ಆಪ್ತ ಸಹಾಯಕ ವ್ಹಿ.ಎಮ್. ಪತ್ತಾರ, ಶಂಕರ ಪಾಟೀಲ ಹಾಗೂ ಇತರರು ಇದ್ದರು.