ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳು ವಿತರಣೆ

ಲೋಕದರ್ಶನ ವರದಿ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.  

ನಂತರ ಶಾಲೆಯ ಮುಖ್ಯೋಪಾಧ್ಯಾರಾದ ಗಣೇಶ ಬಣ್ಣದ ಅವರು ಮಾತನಾಡಿ ಎಸ್.ವಿ.ಎಸ್ ಸಂಸ್ಥೆಯು ಸದಾ ಕ್ರಿಯಾಶೀಲವಾಗಿದ್ದು ಸಮಾಜದ ವಿವಿಧ ಚಟುವಟಿಯಲ್ಲಿ ಸದಾ ಬಾಗಿಯಾಗಿರುವುದನ್ನು ನಾವು ಗಮಸಿದ್ದು ಪ್ರಸ್ತುತ ಸ್ವಯಂ ಪ್ರೇರಣೆಯಿಂದ ಸಕರ್ಾರಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಿಲಿ ಎಂದು ಕ್ರೀಡಾ ಸಾಮಗ್ರಿಗಳನ್ನು ಒದಗಿಸಿರುವುದು ತುಂಬಾ ಸಂತೋಷದ ವಿಷಯ ಸಕರ್ಾರಿ ಶಾಲೆಗಳು ಎಂದರೆ ಬರಿ ಸರ್ಕಾರದ ಆಸ್ತಿ ಮತ್ತು ಶಿಕ್ಷಕರ ಜವಾಬ್ದಾರಿ ಅಷ್ಟೇ ಅಲ್ಲ ಅದು ಸಾರ್ವಜನಿಕರ ಆಸ್ತಿ ನಮ್ಮ ಜವಾಬ್ದಾರಿಯು ಇದೆ ಎನ್ನುವ ನಿಟ್ಟಿನಲ್ಲಿ ಸಂಸ್ಥೆಯ ಈ ಕಳಕಳಿಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು. ನಂತರ ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ನಮ್ಮ ಶಾಲೆಗಳನ್ನ ಬೆಳೆಸೋಣ ಸರ್ಕಾರಿ ಶಾಲೆಗಳನ್ನ ಉಳಿಸೋಣ ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಮಾತನಾಡಿ ಈ ಹಿಂದೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಕ್ರೀಡಾ ಸಾಮಗ್ರಿಗಳನ್ನ ನೀಡಲಾಗಿತ್ತು ಇವಾಗ ಸಕರ್ಾರಿ ಶಾಲೆಗಳಿಗೆ ನೀಡೋಣ ಸರ್ಕಾರಿ ಶಾಲೆಗಳು ನಮ್ಮ ಆಸ್ತಿ ಅವುಗಳ ಅಭಿರುದ್ದಿಯಲ್ಲಿ ನಮ್ಮದು ಅಳಿಲು ಸೇವೆಯಷ್ಟಿರಲಿ ಕ್ರೀಡೆಯಿಂದ ಮಕ್ಕಳು ಸದೃಢರಾಗಲಿ ಎಂದು ನಿರ್ಧರಿಸಿ ಸಾಮಗ್ರಿಗಳನ್ನು ನೀಡಿದ್ದೇವೆ ನಿಮ್ಮ ಮಾರ್ಗದರ್ಶನ ಸದಾ ನಮ್ಮ ಸಂಸ್ಥೆಗಿರಲಿ ಎಂದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದಶರ್ಿ ಮೈಲಾರಪ್ಪ ಕುಣಿ, ಪಧಾದಿಕಾರಿಗಳಾದ ಸಂತೋಷ ಬಿಸನಳ್ಳಿ, ಕನಕಪ್ಪ ವಾಲ್ಮೀಕಿ, ಸಂತೋಷ ಕಠಾರೆ, ವಿರೇಶ ಮರಕೊರೆ, ಕೃಷ್ಣ ಮಾಲ್ವಿ, ಹನುಮೇಶ ಬಳಿಗಾರ ಸೇರಿದಂತೆ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.