ಬ್ಯಾಡಗಿ: ಕೈಗಳ ಸ್ವಚ್ಚತೆಯನ್ನು ಕಾಪಾಡಿಕೊಂಡು ಆಹಾರ ಸೇವನೆ ಮಾಡುವುದರಿಂದ 94 ಕ್ಕೂ ಹೆಚ್ಚು ರೋಗಗಳಿಂದ ದೂರವಿರಬಹುದೆಂದು ತಾಲೂಕಿನ ಕುಮ್ಮೂರ ಗ್ರಾಮದ ಪ್ರಭಾವತಿ ಫಾಸಿ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾ.ಪಂ. ನಿಧಿಯೊಂದರ ಅನುದಾನದಲ್ಲಿ ಗ್ರಾ.ಪಂ.ವ್ಯಾಪ್ತಿಯ 5 ಶಾಲೆಗಳು ಹಾಗೂ 6 ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ಸೋಪುಗಳ ಕಿಟ್ಗಳನ್ನು ವಿತರಿಸಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನೀಲಪ್ಪ ಕಜ್ಜರಿ ಮಾತನಾಡಿದರು.
ಶಾಲೆ ಹಾಗೂ ಅಂಗನವಾಡಿಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಂದರ್ಭದಲ್ಲಿ ಮಕ್ಕಳು ಕೈಗಳನ್ನು ಸ್ವಚ್ಚ ಮಾಡಿಕೊಂಡು ಆಹಾರ ಸೇವಿಸುವ ನಿಟ್ಟಿನಲ್ಲಿ ಅನುಕೂಲತೆಯನ್ನು ಕಲ್ಪಿಸಲು ಗ್ರಾಮ ಪಂಚಾಯತ ವತಿಯಿಂದ ಸೋಪುಗಳನ್ನು ವಿತರಿಸಲು ಸಮಿತಿಯಲ್ಲಿ ತೀಮರ್ಾನಿಸಿದ್ದು, ಪ್ರತಿ 3 ತಿಂಗಳಿಗೊಮ್ಮೆ ಎಲ್ಲಾ ಶಾಲೆ ಹಾಗೂ ಅಂಗನಾಡಿಗಳಿಗೆ ಸೋಪುಗಳನ್ನು ವಿತರಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಲಲಿತಮ್ಮ ಲಮಾಣಿ ಮಾತನಾಡಿ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಸ್ವಚ್ಚತೆಯ ಅರಿವು ಮೂಡಿಸಬೇಕು.
ಅಲ್ಲದೇ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಚತೆಯಿಂದ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.
ಸಿಡಿಪಿಓ ರಾಮಲಿಂಗಪ್ಪ ಮಾತನಾಡಿ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಗೋಸ್ಕರ ಸೋಪುಗಳನ್ನು ವಿತರಿಸುತ್ತಿರುವ ಕುಮ್ಮೂರ ಗ್ರಾ.ಪಂ. ಸಮಿತಿಯ ಕಾರ್ಯವೈಖರಿ ಶ್ಲಾಘನೀಯವೆಂದು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಬಸವಣ್ಣೆವ್ವ ಮೋಟೆವ್ವನವರ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಅಶೋಕ ಹಿರೇಹಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾ.ಪಂ.ಕಾರ್ಯದಶರ್ಿ ವೀರಣ್ಣ ತಳವಾರ ಸ್ವಾಗತಿಸಿದರು. ಎಚ್.ವೆಂಕಟೇಶ ವಂದಿಸಿದರು.