ಲೋಕದರ್ಶನ ವರದಿ
ಘಟಪ್ರಭಾ 12: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡದಲ್ಲಿ ಎಸ್.ಸಿ. ಎಸ್.ಟಿ ಹಾಗೂ ಸಾಮಾನ್ಯ ಜನಾಂಗ ಫಲಾನುಭವಿಗಳಿಗೆ 2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಹೊಲಿಗೆ ಯಂತ್ರಗಳನ್ನು ಪ.ಪಂ ಸದಸ್ಯ ಸಲೀಮ ಎಚ್.ಕಬ್ಬೂರ ಮಂಗಳವಾರದಂದು ವಿತರಿಸಿದರು.
ನಂತರ ಮಾತನಾಡಿದ ಅವರು ಎಸ್.ಸಿ ಎಸ್.ಟಿ ಹಾಗೂ ಇತರೆ ಬಡ ಜನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರಲ್ಲದೇ ಸಕರ್ಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತಿ ಚೌಗಲಾ, ಕಸ್ತೂರಿ ಚೌಧವ, ನಂದಾ ಪವಾರ, ಸುನೀತಾ ಗಾಡಿವಡ್ಡರ, ರೂಪಾ ಶಿಂದೆ, ಬೇಗಂ ಕಬ್ಬೂರ, ರಾಜು ಕಿತ್ತೂರ, ರತ್ನಾ ಮೇದಾರ, ಜುಬೇರ ಡಾಂಗೆ, ಪ.ಪಂ ಸಿಬ್ಬಂಧಿಗಳಾದ ಅಕ್ಷಯ ಮಾನಗಾಂವಿ ಸೇರಿದಂತೆ ಅನೇಕರು ಇದ್ದರು.