ನೆರೆ ಸಂತ್ರಸ್ತರಿಗೆ ಅಕ್ಕಿ ವಿತರಣೆ

ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಮನೆ ಮಠ ಕಳೆದುಕೊಂಡ ನೆರೆ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಯುವಕರು ರವಿವಾರದಂದು ಮೂರು ಟನ್ ಅಕ್ಕಿ ವಿತರಣೆ ಮಾಡಿದರು. 

  ಹಾವೇರಿ ತಾಲೂಕಿನ ಹೊಸರಿತ್ತಿ, ಯಲ್ಲಾಪೂರ,  ಹಿರೆಕೆರೂರ ತಾಲೂಕ ಚಿಕ್ಕೇರೂರು ಬಾಗದ ನೆರೆ ಸಂತ್ರಸ್ತ ಕುಟುಂಬಗಳಿಗೆ ಮೂರು ಟನ್ ಅಕ್ಕಿ ವಿತರಣೆ ಮಾಡಲಾಯಿತು.

   ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಮಲ್ಲೇಶಪ್ಪ ಸವಣೂರ, ಸಂಜಯಗಾಂಧಿ ಸಂಜೀವಣ್ಣನವರ, ನಾಶೀರಖಾನ್ ಪಠಾಣ್, ಅಲ್ಲಾಭಕ್ಷ ಮಕಾಂದಾರ, ಶಿಕಂದರ ಗುಬ್ಬಿ, ಜಾಫರಅಲಿ ಅಗಡಿ, ಮಕ್ಬೂಲಹ್ಮದ ಯಲವಟ್ಟಿ ಅಬ್ಬಾಸಅಲಿ ಅಕ್ಕಿ ಇನ್ನು ಮುಂತಾದವರು ಹಾಜರಿದ್ದರು.