ವಿದ್ಯಾರ್ಥಿಗಳಿಗೆ ನಿತ್ಯ ಬಳಕೆಯ ಕಿಟ್ ವಿತರಣೆ

ಲೋಕದರ್ಶನವರದಿ 

ಶಿಗ್ಗಾವಿ ೨೪: ಪಟ್ಟಣದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ 76 ವಿದ್ಯಾಥರ್ಿಗಳಿಗೆ ನಿತ್ಯ ಬಳಕೆಯ ಕಿಟ್ಗಳನ್ನು  ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ಶಿಗ್ಗಾವಿ ಶಾಖೆಯ ವತಿಯಿಂದ ವಿತರಿಸಲಾಯಿತು.

ಕಿಟ್ ವಿತರಿಸಿ ಮಾತನಾಡಿದ ಹಿರಿಯ ನ್ಯಾಯವಾದಿ  ಎಫ್ ಎಸ್ ಕೋಣವರ, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ತನ್ನ ಶಾಖೆಯನ್ನು ತೆರೆದಿರುವ ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ತನ್ನದೇ ಆದ ಸಮಾಜ ಸೇವೆ, ಆರೋಗ್ಯ ಸೇವೆ  ಜೊತೆಗೆ    ವಿಕಲಚೇತನ ಮಕ್ಕಳ ನೆರವಿಗಾಗಿ ತೊಡಗಿಕೊಂಡಿರುವ  ಸಮಾಜದ ಬಗ್ಗೆ ಇರುವ ಇವರ ಖಾಳಜಿಯನ್ನು ತೋರಿಸುತ್ತದೆ ಇದು ಮಾದರಿ ಕಾರ್ಯವಾಗಿದೆ ಇದನ್ನು ಇನ್ನೊಂದು ಸಂಸ್ಥೆ ಅಳವಡಿಕೊಳ್ಳುವ ಮೂಲಕ ನೆರವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸೇಂಟ್ ಮಿಲಾಗ್ರಿಸ್ ಬ್ಯಾಂಕ್ನ ಹಾವೇರಿ ವಿಭಾಗದ ಅಭಿವೃದ್ಧಿ ಅಧಿಕಾರಿ, ರೋಹನ್ ನಾಯ್ಕ್, ಶಿಗ್ಗಾವಿ ಶಾಖೆಯ ವ್ಯವಸ್ಥಾಪಕ ಅಭಿಷೇಕ್ ತಡಸ, ಬಂಕಾಪೂರ ಶಾಖೆಯ ವ್ಯವಸ್ಥಾಪಕ ರಿಯಾಜ್ ಅಹ್ಮದ್ ಹರವಿ ಮತ್ತು ವಿವಿಧ ವ್ಯವಸ್ಥಾಪಕರಾದ ಶಿದ್ದನಗೌಡ ಪಾಟೀಲ, ಮಂಜುನಾಥ ಬೋಯಿತೆ, ಪಟ್ಟಣದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯಸ್ಥ ನಾಗರಾಜ ದ್ಯಾಮನಕೊಪ್ಪ, ಶಾಲೆಯ ಶಿಕ್ಷಕರು, ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.