ಲೋಕದರ್ಶನವರದಿ
ಕಂಪ್ಲಿ.26: ಸ್ಥಳೀಯ ಮಾರುತಿ ನಗರ ಬಲಬಾಗದ ಕೊರೊನ ವೈರಸ್ ಕಂಟೇನ್ಮೆಂಟ್ಪ್ರದೇಶದ 99 ಬಡಕುಟುಂಬಗಳಿಗೆ ಷರಾಪ್ ವರ್ತಕರು ಮತ್ತು ಕೆಲಸಗಾರರ ಸಂಘದವರು ಮತ್ತು ಅಕ್ಕಿಗಿರಣಿ ಮಾಲೀಕರ ಸಂಘದವರು 10ಕ್ವಿಂಟಲ್ ಅಕ್ಕಿಯನ್ನು, 99ಬಡಕುಟುಂಬಗಳಿಗೆ ಆಹಾರ ಪಡಿತರ ಕಿಟ್ಗಳನ್ನು ವಿತರಿಸಿದರು.
ಕೊರೊನಾ ಸೇವೆಯಲ್ಲಿರುವ ಆರೋಗ್ಯ, ಪುರಸಭೆ, ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿಗೆ ಕಳೆದ ಐದು ದಿನಗಳಿಂದ ಆಹಾರ ಪೊಟ್ಟಣಗಳನ್ನು ವಿತರಿಸಿದರು. ತಹಸೀಲ್ದಾರ ಎಂ.ರೇಣುಕಾ, ಸಿಪಿಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ, ಷರಾಫ್ ವರ್ತಕರ ಸಂಘದ ಅಧ್ಯಕ್ಷ ರಾಯ್ಕರ್ ಜಿ.ಜಗದೀಶ್, ಕಾರ್ಯದಶರ್ಿ ಡಿ.ಮೌನೇಶ್, ಡಿ.ಎ.ರುದ್ರಪ್ಪಚಾರ್ ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಜಿ.ರಾಜಾರಾವ್, ಡಿ.ವಿ.ಸುಬ್ಬಾರಾವ್, ಕೇಶವ, ಡಿ.ಶ್ರೀಧರಶ್ರೇಷ್ಠಿ, ಬಿ.ರವೀಂದ್ರನಾಥ ಶ್ರೇಷ್ಠಿ, ಉಬಾಳೆ ತುಳಸಿರಾಮ, ಟಿ.ಕೊಟ್ರೇಶ್, ಟಿ.ವೆಂಕಟರಮಣ, ಜಿ.ವಿ.ಶ್ರೀನಿವಾಸ್, ಸತ್ಯನಾರಾಯಣಬಾಬು, ಜಿ.ವಿರುಪಾಕ್ಷಿ, ಇತರರಿದ್ದರು.
ಕೊರೊನಾ ಸೋಂಕಿತ ವ್ಯಕ್ತಿ ಡಿಸ್ಚಾಜರ್್