ಬಳ್ಳಾರಿ/ಹೊಸಪೇಟೆ,ಏ.17: ಕೋವಿಡ್-19 ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಬಡವರಿಗೆ, ಕೂಲಿ ಕಾಮರ್ಿಕರ ನೆರವಿಗಾಗಿ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತಮ್ಮ ವೈಯಕ್ತಿಕ ಖಚರ್ಿನಲ್ಲಿ ಉಚಿತ ಪಡಿತರ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.
ಸಕರ್ಾರವು ಮೇ 03ರವರೆಗೂ ಲಾಕ್ ಡೌನ್ ಆದೇಶ ಹೊರಡಿಸುವುದರ ಜೊತೆಗೆ ಮನೆಯಲ್ಲೇ ಇರುವುದರ ಮೂಲಕ ಸಾರ್ವಜನಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ. ಸಾರ್ವಜನಿಕ ಅಂತರದಿಂದ ರೋಗ ತಡೆಗಟ್ಟಬಹುದಾಗಿದ್ದು ದಿನಗೂಲಿ ನೌಕರರಿಗೆ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಹೊಸಪೇಟೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 'ಆಹಾರನಂದ' ಹೆಸರಿನಲ್ಲಿ ಜೋಳ 6 ಕೆ.ಜಿ, ತೊಗರಿಬೇಳೆ 3 ಕೆ.ಜಿ, ಅಡುಗೆ ಎಣ್ಣೆ 2 ಲೀ., ಖಾರದ ಪುಡಿ 400ಗ್ರಾಂ, ಹಾಲಿನ ಪೌಡರ್ 150 ಗ್ರಾಂ, ಅರಿಷಿಣ, ಸಾಸುವೆ ಹಾಗೂ ಜೀರಿಗೆ 100 ಗ್ರಾಂ, ಬೆಳ್ಳುಳ್ಳಿ 500 ಗ್ರಾಂ, ಉಪ್ಪು 1 ಕೆಜಿ ಹೊಂದಿದ ಪಡಿತರ ಕಿಟ್ ಗಳ ವಿತರಣೆ ಆರಂಭಗೊಂಡಿದ್ದು ಶುಕ್ರವಾರದಂದು ಬುಕ್ಕಸಾಗರ, ಗುಂಡವದ್ದೀಗೇರೆ ಗ್ರಾಮಗಳಿಂದ ವಿತರಣೆ ಕಾರ್ಯ ಆರಂಭವಾಗಿದ್ದು ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಒಟ್ಟು 57,717 ಪಡಿತರ ಹೊಂದಿದ ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಗುತ್ತಿದೆ.