ಆನೆ ಕಾಲು ರೋಗ ನಿರ್ಮೂಲನೆಗೆ ಮಾತ್ರೆ ವಿತರಣೆ
ತಾಳಿಕೋಟಿ, 24; ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೊಲ್ಲೊಂದಾದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿ ಡಿಇಸಿ ಆನೆಕಾಲು ರೋಗ ತಡೆಗಟ್ಟುವ ಮಾತ್ರೆಗಳು ಮತ್ತು ಜಂತುಹುಳ ಮಾತ್ರೆಗಳನ್ನು ವಿದ್ಯಾರ್ಥಿಗಳಿಗೆ ನುಂಗಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ವಿದ್ಯಾರ್ಥಿಗಳಿಗ ಈ ರೋಗದ ಕುರಿತು ಪ್ರಾಥಮಿಕ ಮಾಹಿತಿ ನೀಡಿ ಮಾತ್ರೆಗಳನ್ನು ನುಂಗಿಸಿದರು. ಈ ಸಮಯದಲ್ಲಿ ಡಾ. ಎಸ್.ಬಿ. ಹುಕ್ಕೇರಿ, ಬಿ.ಎಸ್.ಯೋಗಿಮಠ, ಎಂ.ಎಸ್.ಟಕ್ಕಳಕಿ, ಎನ್. ಹೆಚ್.ಬೋರಗಿ, ಕೆ. ವೈ. ಪಾಟೀಲ, ಎಫ್.ಎ.ಪತ್ತಾರ, ಮುಖ್ಯೋಪಾಧ್ಯಾಮ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ, ಮತ್ತು ಆಶಾ ಕಾರ್ಯಕರ್ತರು ಇದ್ದರು.