ಲೋಕದರ್ಶನ ವರದಿ
ಕೊಪ್ಪಳ: ಕೊಪ್ಪಳ ಬಿ.ಟಿ.ಪಾಟೀಲ್ ನಗರದಲ್ಲಿರುವ ಅಬ್ಯಾಕಸ್ ಶಾಲೆಯ ಮಕ್ಕಳು ನಗರದ ಕುಷ್ಟಗಿ ರಸ್ತೆಯಲ್ಲಿರುವ ಸಾಮಥ್ರ್ಯ ಸಂಸ್ಥೆಗೆ ಆಗಮಿಸಿ ಇಲ್ಲಿ ನಡೆಯುತ್ತಿರುವ 6 ವರ್ಷದೊಳಗಿನ ವಿಕಲಚೇತನ ಮಕ್ಕಳ ಪುನಃಶ್ಚೇತನ ಶಿಬಿರದಲ್ಲಿ "ಮಕ್ಕಳ ದಿನಾಚರಣೆ" ದಿ. 15ರಂದು ವಿಕಲಚೇತನ ಮಕ್ಕಳಿಗೆ ನೋಟಬುಕ್ಸ್, ಸಿಹಿ ತಿನಿಸು, ಬಿಸ್ಕಿಟ್ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಅನುಸೂಯಾ ಮಾತನಾಡಿ ವಿಕಲಚೇತನರ ಅಭಿವೃದ್ಧಿಗಾಗಿ ಸಂಸ್ಥೆಯ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ವಿಕಲಚೇತನರು ಅಂಗವಿಕಲತೆಯನ್ನು ಮೆಟ್ಟಿ ನಿಂತು ಹಲವು ಸಾಧನೆಗಳನ್ನು ಮಾಡಿದ್ದಾರೆ. ಶಾಲೆಯ ಮಕ್ಕಳು ದೊಡ್ಡವರಾದ ಮೇಲೆ ಸಹಾಯ ಮಾಡುವ ಮನೊಭಾವನೆಯನ್ನು ಬೆಳೆೆಸಿಕೊಳ್ಳಬೇಕು ಮತ್ತು ನಿಮ್ಮ ಜನ್ಮದಿನಗಳಂದು ಹೊರಗಡೆ ಹೊಟೇಲ್ಗಳಿಗೆ ಹೋಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ಬದಲು ಸಂಸ್ಥೆಗೆ ಭೇಟಿ ನೀಡಿ ವಿಕಲಚೇತನ ಮಕ್ಕಳೊಂದಿಗೆ ಆಚರಿಸಿಕೊಳ್ಳಿರಿ ಎಂದು ಕರೆ ನಿಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದದವರು, ಸಾಮಥ್ರ್ಯದ ಸಿಬ್ಬಂದಿ ವರ್ಗದವರು ಮತ್ತು ಕೆನಡಾ ದೇಶದ ಫಿಜಿಯೋಥೆರಪಿಸ್ಟ್ಗಳಾದ ಹಿಲೆರಿ ಕ್ರೌಲಿ ಮತ್ತು ಬಾರ್ಬರಾ ಪಡರ್ಿ ಉಪಸ್ಥಿತರಿದ್ದರು.