ನೆರೆ ಸಂತ್ರಸ್ತ ರೈತರ ಜಾನುವಾರುಗಳಿಗೆ ಪಶು ಆಹಾರ ವಿತರಣೆ

ಮುಧೋಳ: ಕಾಂಗ್ರೆಸ್ (ಐ) ಕಿಸಾನ ಘಟಕ ಹಾಗೂ ಸತೀಶ ಬಂಡಿವಡ್ಡರ ಫೌಂಡೇಶನ, ಇವರ ವತಿಯಿಂದ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ಇಂಗಳಗಿ ಗ್ರಾಮದಲ್ಲಿ ನೆರೆ ಸಂತ್ರಸ್ತ ರೈತರ ಜಾನುವಾರುಗಳಿಗೆ ಪಶು ಆಹಾರ ವಿತರಸಿದರು. 

        ಕಾಂಗ್ರೇಸ್ ಕಿಸಾನ್ ಸೇಲ್ ಬೆಂಗಳೂರು ಘಟಕದ ಅಧ್ಯಕ್ಷರಾದ ಸಚೀನ ಮೇಘಾ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿತ್ತಾ 2.5 ಹೆಕ್ಟರ್ ಗೆ ಸರಕಾರ ಒಬ್ಬ ವ್ಯಕ್ತಿಗೆ ಪರಿಹಾರ ಮಾಡಿದ್ದು ಅವೈಜ್ಞಾನಿಕ ಅದನ್ನು ರದ್ದು ಪಡಿಸಿ ರೈತನ ಜಮೀನು ಎಷ್ಟು ಮುಳಗಿದ್ದರು ಅದಕ್ಕೆ ಪೂರ್ಣ ಪರಿಹಾರ ಕೊಡಬೇಕು.ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳಿಗೆ ಈಗ ಘೋಷಿಸಿದ 13 ಸಾವಿರ ಹಣ ಪರಿಹಾರ ಸರಿಯಲ್ಲ. ಕನಿಷ್ಟ ರೈತರು ಬೆಳೆದ ಉತ್ಪಾದನಾ ವೆಚ್ಚದ 70% ಅಂದರೆ ಕಬ್ಬಿಗೆ ಪ್ರತಿ ಎಕರೆಗೆ ಸುಮಾರು 30 ಸಾವಿರ ಹಣ ಪರಿಹಾರ ಘೋಷಿಸಬೇಕು ಹಾಗೂ ವಾಣಿಜ್ಯ ಬೆಳೆಗಳಾದ ಬಾಳೆ, ಕಲ್ಲಂಗಡಿ, ದ್ರಾಕ್ಷಿ ಹಾಗೂ ಇನ್ನಿತರ ಕಾಯಿಪಲ್ಲೆಗಳ ಬೆಳೆಗಳಿಗೆ ಪರಿಗಣಿಸಬೇಕು.ಕಬ್ಬಿಗೆ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆ ಅಡಿಯಲ್ಲಿ ಸೇರಿಸಬೇಕು.ರೈತರ ಜಾನುವಾರುಗಳಿಗೆ 30 ಸಾವಿರ ರೂಗೆ ನಿಗದಿ ಪಡಿಸಿದನ್ನು 50 ಸಾವಿರದವರೆಗೆ ಹೆಚ್ಚಿಸಬೇಕು.ನಿರಾಶ್ರಿತರ ಮನೆಗಳಿಗೆ 5 ಲಕ್ಷ ದಿಂದ 10 ಲಕ್ಷ ದವರೆಗೆ ಹಾಗೂ ರಿಪೇರಿಗೆ 3 ಲಕ್ಷದವರೆಗೆ ಸರಕಾರ ಪರಿಹಾರ ನೀಡಬೇಕು.ಪ್ರವಾಹದಿಂದ ಬಾದಿತವಾಗುವ ಹಳ್ಳಿಗಳನ್ನು ಯು.ಕೆ.ಪಿ ಮಾದರಿಯಲ್ಲಿ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಅಗ್ರಹಿಸಿ ಸರಕಾರಕ್ಕೆ ಒತ್ತಾಯಿಸಿದರು. ಕಾಂಗ್ರೆಸ್ ಕಿಸಾನ ಸೇಲ್ ಉಪಾಧ್ಯಕ್ಷರಾದ ಗೋವಿಂದಪ್ಪ ಗುಜ್ಜನ್ನವರ, ಕಾಂಗ್ರೇಸ್ ಧುರೀಣರಾದ ಸತೀಶ ಬಂಡಿವಡ್ಡರ, ಕಾಂಗ್ರೆಸ್ ಕಿಸಾನ್ ಸೇಲ್ ಜಿಲ್ಲಾಧ್ಯಕ್ಷರಾದ ನಂದಕುಮಾರ ಪಾಟೀಲ, ಕೆ.ಪಿ.ಸಿ.ಸಿ ಮಾಜಿ ಕಾರ್ಯದಶರ್ಿಗಳಾದ ದಯಾನಂದ ಪಾಟೀಲ, ಕಾಂಗ್ರೇಸ್ ಕಿಸಾನ ಸೇಲ ಪ್ರಧಾನ ಕಾರ್ಯದಶರ್ಿಗಳಾದ ಸಿದ್ದು ಕೊಣ್ಣೂರ, ಮತ್ತೋರ್ವ ಪ್ರಧಾನ ಕಾರ್ಯದಶರ್ಿಗಳಾದ ಗೋವಿಂದಪ್ಪ ಪಾಟೀಲ, ತಾಲೂಕ ಪಂಚಾಯತ ಸದಸ್ಯ ಸಂಗಪ್ಪ ಇಮ್ಮನ್ನವರ, ಕೆ. ವಾಯ್. ಬುದ್ನಿ, ಸಂಗಪ್ಪ ನಾಗರಡ್ಡಿ, ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ತಿರುಪತಿ ಬಂಡಿವಡ್ಡರ, ಬಸು ಇಟ್ಟನ್ನವರ, ಮುಧೋಳ ಸಾಮಾಜಿಕ ಜಾಲತಾಣದ ಸಂಚಾಲಕ ಹಣಮಂತ ಪಾಟೀಲ ಉಪಸ್ಥಿತರಿದ್ದರು.