ಲೋಕದರ್ಶನ ವರದಿ
ಶಿರಹಟ್ಟಿ 07: ಸ್ಥಳೀಯ ಗ್ರಾಹಕರ ಸೇವಾ ಕೇಂದ್ರದಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕನರ್ಾಟಕ ಕಾರ್ಡಗಳನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಶಿವಣ್ಣ ಎಸ್ ಅವರು ವಿತರಿಸಿದರು.
ಈ ಯೋಜನೆಯು ಗ್ರಾಹಕರಿಗೆ ಕೇವಲ ಹತ್ತು ಮತ್ತು 35 ರೂಪಾಯಿಗಳಲ್ಲಿ ವಾರ್ಷಿಕ ಆದಾಯ ಐದು ಲಕ್ಷದವರೆಗೆ ಇರುವವರಿಗೆ ಈ ಉಚಿತ ಆರೋಗ್ಯ ಸೇವೆಯನ್ನು ಪಡೆಯುವ ಅವಕಾಶವನ್ನು ಸರಕಾರ ನೀಢುತ್ತಿರುವುದು ಶ್ಲಾಘನೀಯ ಎಂದರು.
ಪಟ್ಟಣದ ವಿಶ್ವ ಕಂಪ್ಯೂಟರ್ ಅಕಾಡಮಿ ಸಿಎಸ್ಸಿ ಕೇಂದ್ರದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಪ್ರಮುಖ ಯೋಜನೆಯಾದ ಈ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಬಡ ಜನತೆಗೆ ತುಂಬ ಅನುಕೂಲವಾಗಿದ್ದು ಸದರ ಯೋಜನೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ನುಡಿದರು.
ಜೆವಿಕೆ ಸಮನ್ವಯ ಅಧಿಕಾರಿ ಚಂದ್ರಕಲಾ, ವಿಶ್ವ ಕಂಪ್ಯೂಟರ್ ಅಕಾಡಮಿ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ, ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಫಲಾನುಭವಿಗಳು ಉಪಸ್ತಿತರಿದ್ದರು.