ಮಕ್ಕಳು ಕೂಡಿಟ್ಟ ಹಣದಿಂದ ವೃದ್ಧ ದಂಪತಿಗಳಿಗೆ ದಿನಸಿ ವಿತರಣೆ

ಬಳ್ಳಾರಿ,ಏ.18: ಕರೋನಾ ವೈರಾಣು ಹರಡುವ ಭೀತಿ ಹಿನ್ನಲೆಯಲ್ಲಿ  ಲಾಕ್ಡೌನ್ ಮಾಡಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಅವರ ಪುತ್ರಿಯರಾದ ರೇಖಾ ಮತ್ತು ರಚನಾ ದಾಸಪ್ಪನವರ್ ತಾವು ಕೂಡಿಟ್ಟ ಹಣದಲ್ಲಿ ದಿನಸಿ ಖರೀದಿಸಿ ಶನಿವಾರ ಬಂಡಿಹಟ್ಟಿ ರಾಮನಗರದ ಗಂಗಪ್ಪ ಮತ್ತು ಗಂಗಮ್ಮ ಹೊಸೂರು ಎಂಬ ವೃದ್ಧ ದಂಪತಿಗಳಿಗೆ ವಿತರಿಸಲಾಯಿತು.