ಕರವೇ ವತಿಯಿಂದ ಆರೋಗ್ಯ ಇಲಾಖೆಗೆ ಹಣ್ಣು, ಸಾನಿಟೈಜರ್ ವಿತರಣೆ

ಲೋಕದರ್ಶನವರದಿ

ಬಳ್ಳಾರಿ ಏ 11.: ಕರ್ನಾಟಕ  ರಕ್ಷಣಾ ವೇದಿಕೆ, ಜಿಲ್ಲಾ ಘಟಕ ವತಿಯಿಂದ ಏ.10ರಂದು ಬಳ್ಳಾರಿ ನಗರದ ಅತ್ಯಂತ ಶ್ರದ್ಧೆಯಿಂದ ಮಹಾಮಾರಿ ಕರೋನಾ ವೈರಸ್-19ನ ಪರವಾಗಿ ನಮ್ಮೆಲ್ಲರ ರಕ್ಷಣೆಯ ಮುಂದಾಗಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ನಮ್ಮ ಕರವೇ ವತಿಯಿಂದ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಅದರಲ್ಲಿ ರೈತರ ಬೆಳೆದ ಹಣ್ಣು, ತಕರಾರಿ ಇನ್ನುತರೆಯ ಬೆಳೆಗಳಿಗೆ ಮಾರಾಟ ಮಾಡದೇ ತುಂಬಾ ತೊಂದರೆ ಅನುಭವಿಸುತ್ತಿದ್ದು, ಇದರಿಂದ ಸಾಕಷ್ಟು ನಷ್ಟವನ್ನು ಹೊಂದುತ್ತಿರುವ ರೈತರಿಂದ ನಮ್ಮ ಕರವೇ ನೇರವಾಗಿ ಅವರ ಹತ್ತಿರ ಹಣ್ಣುಗಳನ್ನು ಖರೀದಿ ಮಾಡಿ ಇದನ್ನು ಕರೋನಾ ವೈರಸ್-19 ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾರಿಗೂ ಮುಂದಿನ ದಿನಗಳಲ್ಲಿ ವಿತರಣೆ ಮಾಡುವುದಾಗಿ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್ರವರು ಈ ಸಂದರ್ಭದಲ್ಲಿ ತಿಳಿಸಿದರು.

ಹಾಗೂ ಮೊದಲಿಗೆ ಗಾಂಧಿ ನಗರದ ಪೋಲೀಸ್ ಠಾಣೆಯಲ್ಲಿ, ಹಣ್ಣು ಮತ್ತು 500ಎಮ್.ಎಲ್. ಸ್ಯಾನಿಟೈಜರ್ ನೀಡಿ, 2ನೇದಾಗಿ ಬ್ರೂಸ್ಪೇಟೆ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಕೌಲ್ಬಜಾರ್ ಪೊಲೀಸ್ ಠಾಣೆ, ಎ.ಪಿ.ಎಂ.ಸಿ.ಪೋಲಿಸ್ ಠಾಣೆಯ ಎಲ್ಲಾ ಅಧಿಕಾರಿಗಳಿಗೆ, ಆರೋಗ್ಯ ಇಲಾಖೆಗೆ ಇನ್ನು ಇತರರಿಗೆ ಸುಮಾರು 1000 ಸಾವಿರ ಹಣ್ಣಿನ ಬಾಕ್ಸ್ ಮತ್ತು 500 ಸ್ಯಾನಿಟೈಜರ್ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.  

     ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್, ತೋಟದ ವಿರೇಶ್, ಶಶಿಕುಮಾರ್, ಚಂದ್ರಮೋಹನ್, ಬಸವರಾಜ ಕಂಚಿ, ಶಬರಿ ರವಿ, ಹುಬ್ಬಳ್ಳಿ ರಾಜ, ಕಪ್ಪಗಲ್ಲು ಚಂದ್ರಶೇಖರ್ ಆಚಾರಿ,  ಮಲ್ಲಿಕಾಜರ್ುನ ಚಾನಾಳ್, ಮಸ್ಕಿ ಮಹಾಂತೇಶ್ ಮುಂತಾದವರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.