ಲೋಕದರ್ಶನ ವರದಿ
ಬೈಲಹೊಂಗಲ 26: ಗ್ರಾಮೀಣ ಜನತೆಯ ಆರೋಗ್ಯ ದೃಷ್ಠಿಯಿಂದ ರಾಜ್ಯ ಸರಕಾರ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್ ವಿತರಿಸುತ್ತಿದ್ದು, ಅವುಗಳ ಸದ್ಭಳಕೆಯಾಗಬೇಕೆಂದು ಸಂಸದೀಯ ಕಾರ್ಯದಶರ್ಿ ಮಹಾಂತೇಶ ಕೌಜಲಗಿ ಹೇಳಿದರು.
ಅವರು ದಿ.25ರಂದು ಪಟ್ಟಣದ ತಹಶೀಲದಾರ ಸಭಾಭವನದಲ್ಲಿ ಕಿತ್ತೂರ, ಬೈಲಹೊಂಗಲ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಗ್ಯಾಸ್ ವಿತರಿಸಿ, ಮಾತನಾಡಿ, ಸರಕಾರ ಯೋಜನೆಯ ಲಾಭ ಪಡೆಯದವರು ಅಧಿಕಾರಿಗಳನ್ನು ಸಂಪಕರ್ಿಸಿ ಅಜರ್ಿ ಸಲ್ಲಿಸಿ ಲಾಭ ಪಡೆಯಬೇಕೆಂದರು.
ಯೋಜನೆಯನ್ನು ಸಮರ್ಪಕವಾಗಿ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದರು.
ತಹಶೀಲದಾರ ಡಾ. ದೊಡ್ಡಪ್ಪ ಹೂಗಾರ ಮಾತನಾಡಿ, ಈಗಾಗಲೇ 637 ಅರ್ಹ ಫಲಾನುಭವಿಗಳಲ್ಲಿ 501 ಫಲಾನುಭವಿಗಳು ಯೋಜನೆಯ ಅನುಕೂಲ ಪಡೆದಿದ್ದಾರ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ 40 ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಗುತ್ತಿದೆ ಎಂದರು.
ಆಹಾರ ನಿರೀಕ್ಷಕ ಬಸವರಾಜ ವಡ್ಡರಟ್ಟಿ, ಅಕ್ಷರ ದಾಸೋಹ ಅಧಿಕಾರಿ ಪ್ರಕಾಶ ಮೆಳವಂಕಿ, ಆಹಾರ ಸರಬರಾಜು ವ್ಯವಸ್ಥಾಪಕ ನಿಂಗಪ್ಪ ಕಣಬಗರ್ಿ. ಈರಣ್ಣ ಕುಂಬಾರ, ಫಲಾನುಭವಿಗಳು, ಮತ್ತಿತರರು ಇದ್ದರು.