ಲೋಕದರ್ಶನ ವರದಿ
ಶಿರಹಟ್ಟಿ 06: ಲಾಕ್ಡೌನ್ದಿಂದ ಪಟ್ಟಣದಲ್ಲಿ ನೂರಾರು ಜನ ಹಸಿವೆಯಿಂದ ಬಳಲುತ್ತಿದ್ದು ಅಂಥಹ ಜನರಲ್ಲಿ ಕಾರ್ಯನಿರತ ಪೋಲಿಸ್ ಸಿಬ್ಬಂದಿ, ಪೌರ ಕಾಮರ್ಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಆಹಾರ ವಿತರಣೆ ಮಾಡುತ್ತಿರುವುದು ನಿಜವಾಗಲೂ ಉತ್ತಮ ಕಾರ್ಯವಾಗಿದೆ ಎಂದು ಪಿಎಸ್ಐ ಸುನೀಲಕುಮಾರ ನಾಯಕ ಅಭಿಪ್ರಾಯ ಪಟ್ಟರು.
ಕೊರೊನಾ ಮಹಾಮಾರಿ ಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದ ಜನತೆಯ ಹಿತದೃಷ್ಟಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಕಪ್ಯರ್ೂದಿಂದಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರಿಗೆ ಹಾಗೂ ಭಿಕ್ಷುಕರಿಗೆ ಒಂದು ತುತ್ತು ಅನ್ನಕ್ಕೂ ಪರದಾಡುವಂತಹದ್ದನ್ನು ಕಂಡು ನಮ್ಮ ತಾಲೂಕಾ ಕನರ್ಾಟಕ ರಕ್ಷಣಾ ವೇದಿಕೆ ಘಟಕದಿಂದ ಇಂದು ಆಹಾರ ಪದಾರ್ಥಗಳನ್ನು ವಿತರಿಸಿದೆವು ಎಂದು ತಾಲೂಕಾಧ್ಯಕ್ಷ ರಫೀಕ ಕೆರಿಮನಿ ಹೇಳಿದರು.
ಈ ಸಂದರ್ಭದಲ್ಲಿ ಶಶಿಧರ ಶಿರಸಂಗಿ, ಮುತ್ತು ಭಾವಿಮನಿ, ರಾಘು ಉಪ್ಪಾರ, ದೇವಪ್ಪ ಬಟ್ಟೂರ, ಗೌಸ್ ಕಲಾವಂತ, ಸುನೀಲ ಪವಾರ, ಮನ್ಸೂರ ಮಕಾನದಾರ, ಈರಣ್ಣ ಬಾಗೇವಾಡಿ, ಖಾದರ ಟಪಾಲ, ಕಲಾವತಿ ನಾವಿ, ಸಾಯಿರಾಬಾನು ಒಂಟಿ, ರೇಖಾ ಮುಧೋಳಕರ, ಶೋಭಾ ಬಳಿಗೇರ, ಯೋಗಿತಾ ದೇಸಾಯಿಪಟ್ಟಿ, ವಿಜಯಲಕ್ಷ್ಮಿ ತಳವಾರ ಇನ್ನೂ ಅನೇಕರು ಉಪಸ್ಥಿರಿದ್ದರು.