ಬಳ್ಳಾರಿ,ಜೂ.02: ರಾಜ್ಯದಲ್ಲಿ ಲಾಕ್ಡೌನ್ ಆದೇಶದ ಕಾರಣ ಹಿಂದೂ ಧಾಮರ್ಿಕ ಧತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಾತಿ ಹಾಗೂ ಪೂಜಾ ಕೈಂಕರ್ಯಗಳಿಗೆ ತಾತ್ಕಾಲಿಕ ನಿಬರ್ಂಧ ವಿಧಿಸಿರುವ ಹಿನ್ನೆಲೆಯಲ್ಲಿ ಧಾಮರ್ಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ ವರ್ಗದ ದೇವಾಲಯ ಅರ್ಚಕರುಗಳಿಗೆ ಯಾವುದೇ ಆದಾಯವಿಲ್ಲದೇ ಜೀವನೋಪಾಯಕ್ಕೆ ತೊಂದರೆಯಾಗಿದ್ದು, ಕೂಡಲೇ ಜಿಲ್ಲೆಯಲ್ಲಿರುವ ಸಿ ವರ್ಗದ ದೇವಾಲಯಗಳ ಆರ್ಚಕರು ಮತ್ತು ಸಿಬ್ಬಂದಿಗೆ ಜಿಲ್ಲೆಯಲ್ಲಿ ಅಥರ್ಿಕವಾಗಿ ಸದೃಢವಾಗಿರುವ ದೇವಾಲಯಗಳ ನಿಧಿಯಿಂದ ಆಹಾರ ಕಿಟ್ ವಿತರಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೂಚನೆ ನೀಡಿದ್ದಾರೆ.
ಈ ಕುರಿತು ಹಿಂದೂ ಧಾಮರ್ಿಕ ಸಂಸ್ಥೆ ಮತ್ತು ಧಮರ್ಾದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ಪತ್ರ ಬರೆದು ಸೂಚಿಸಿರುವ ಅವರು ತಮ್ಮ ಇಲಾಖೆ ವ್ಯಾಪ್ತಿಯ ಅಧಿಸೂಚಿತ ದೇವಾಲಯಗಳಲ್ಲಿ ಸೇವೆ/ಪೂಜಾ ಕೈಂಕರ್ಯಗಳಲ್ಲಿ ಭಕ್ತಾದಿಗಳು/ಸಾರ್ವಜನಿಕರು ಭಾಗವಹಿಸುವುದನ್ನು ರದ್ದುಗೊಳಿಸಿದ ಹಿನ್ನೆಲೆ ಈ ಸಮಸ್ಯೆ ಉಂಟಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ತಾಲೂಕಿನಲ್ಲಿ ಬರುವ ಸಿ ಶ್ರೇಣಿಯ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರದ ಕಿಟ್ಗಳನ್ನು ಸರಬರಾಜು ಮಾಡಲು ಅಗತ್ಯಕ್ರಮಕೈಗೊಳ್ಳಬೇಕು ಮತ್ತು ಈ ಕುರಿತು ಸಂಬಂಧಪಟ್ಟದ ತಾಲೂಕಿನಲ್ಲಿರುವ ತಹಸೀಲ್ದಾರರೊಂದಿಗೆ ಸಮನ್ವಯಗೊಳಿಸಿ ಅಥರ್ಿಕವಾಗಿ ಸದೃಢ ಆದಾಯವಿರುವ ದೇವಾಲಯಗಳ ನಿಧಿಯಿಂದ ಖಚರ್ು ಭರಿಸಿ ಆಹಾರದ ಕಿಟ್ಗಳನ್ನು ಸರಬರಾಜು ಮಾಡಿ ಕೂಡಲೇ ವರದಿ ಒಪ್ಪಿಸಬೇಕು ಎಂದು ಅವರು ಸೂಚಿಸಿದ್ದಾರೆ.