ಲೋಕದರ್ಶನವರದಿ
ಕಂಪ್ಲಿ೧೧. ಜಗತ್ತಿನ ಮಾಹಮಾರಿ ಕರೊನ ವೈರಸದಿಂದ ಭಾರತದ್ಯಾಂತಹ ಲಾಕಡೌನ ಹಿನ್ನಲೆಯಲ್ಲಿ ಪಟ್ಟಣದ ಶುಗರ್ ಫ್ಯಾಕ್ಟರಿ ಚಿಕ್ಕಜಾಯಿಗನೂರು ರಸ್ತೆಯಲ್ಲಿರುವ 23ನೇವಾಡರ್್ ಸೋಮಪ್ಪ ಕಾಲನಿಯ ಮತ್ತು ವಿವಿಧ ಕಡೆಗಳಲ್ಲಿ ಕೂಲಿ ಕಾರ್ಮಿಕರಿಗೆ , ಅನಾಥರಿಗೆ, ಬಡವರಿಗೆ ದುಡಿಮೆ ಇಲ್ಲದೆ ಒಂದೊತ್ತು ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಕಂಪ್ಲಿ ಕ್ಷೇತ್ರ ಮಾಜಿ ಶಾಸಕ ಟಿ.ಎಚ್.ಸುರೇಶ್ಬಾಬು ಅವರು ನೀಡಿದ ಬೆಳಗಿನ ಉಪಹಾರ, ಮಧ್ಯಾಹ್ನ ಊಟದ ಆಹಾರ ಪಾಕೆಟ ಪುರಸಭೆ ಬಿಜೆಪಿ ಸದಸ್ಯರು ಮತ್ತು ಮುಖಂಡರು ವಿತರಿಸಿದರು.
ಪುರಸಭೆ ಬಿಜೆಪಿ ಸದಸ್ಯರಾದ ಸಿ.ಆರ್.ಹನುಮಂತ, ಹೂಗಾರ ರಮೇಶ್, ಬಿಜೆಪಿ ಕಂಪ್ಲಿ ಕ್ಷೇತ್ರದ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಮುಖಂಡರಾದ ಜಿ.ಸುಧಾಕರ, ಕಡೆಮನಿ ಪಂಪಾಪತಿ, ಎಸ್.ಎಂ.ಸಂಗಮೇಶ್, ಎಸ್.ರಾಘವೇಂದ್ರ, ಜಂಗಾ ನಾಗರಾಜ, ಡಿ.ವೀರಣ್ಣ, ಮರಿಯಣ್ಣ, ಮನೋಜ್, ಉಪ್ಪಾರ ನಾಗರಾಜ, ಖಾಸಿಂವಲಿ, ಕನಕ, ಓಬಳೇಶ್, ರಾಘು, ಎಸ್.ಎಂ.ಸಿದ್ದು, ದೇವರಾಜ್, ಪ್ರಕಾಶ್, ಕಂಪ್ಲಿ ವಾರಿಯರ್ಸ್ ಸಂಘದವರು ಸೇರಿ ಅನೇಕರಿದ್ದರು ಇತರರಿದ್ದರು.