ದಿ. ದ್ಯಾನೇಶ್ವರಿ ಹುಟ್ಟು ಹಬ್ಬದ ಪ್ರಯುಕ್ತ ವೃದ್ಧಾಶ್ರಮಕ್ಕೆ ಪರಿಕರಗಳ ವಿತರಣೆ
ಹೂವಿನ ಹಡಗಲಿ 18: ಪಟ್ಟಣದಲ್ಲಿ ಕೃಪಾಶ್ರಯ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ದೊಡ್ಡ ಬಸಯ್ಯ ನವರ ಕುಟುಂಬದ ವತಿಯಿಂದ ತಮ್ಮ ಮಗಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಗುರುವಾರ ಸಂಜೆ ವೃದ್ಧಾಶ್ರಮದ ಮಹಿಳೆಯರಿಗೆ ಪರಿಕರಗಳನ್ನು ವಿತರಣೆ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ವಿ.ಕೆರ್. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಹೆಚ್ ಎಂ ವಿರೇಶ ನಗರೀಕರಣ, ಪತಿ-ಪತ್ನಿ ಉದ್ಯೋಗ, ಸಂಕುಚಿತ ಮನೋಭಾವ, ವಿಭಕ್ತ ಕುಟುಂಬ ಹೀಗೆ ಅನೇಕ ಕಾರಣಗಳಿಂದ ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದ ತಂದೆ-ತಾಯಿಯರು ವೃದ್ದಾಶ್ರಮದ ಆಸರೆಗೆ ಬರುತ್ತಿದ್ದಾರೆ.
ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ದುರಂತ. ನಮ್ಮ ಮಲ್ಲಿಗೆ ನಾಡಿನಲ್ಲಿ ಸೇವಾ ಮನೋಭಾವನೆಯ ಈ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿರುವುದು ಹಿರಿಯ ಜೀವಗಳಿಗೆ ತುಸು ನೆಮ್ಮದಿ ಎನಿಸಿವೆ ಎಂದರು.ಸಾನ್ನಿಧ್ಯ ವಹಿಸಿದ್ದ ಹಡಗಲಿ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಇಂದಿನ ದಿನಗಳಲ್ಲಿ ಹೆತ್ತವರು ನಮ್ಮ ಏಕಾಂತಕ್ಕೆ ಅಡ್ಡಿ ತರುತ್ತಾರೆಂದು ಅವರನ್ನೇ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರವೃತಿ ಹೆಚ್ಚಾಗುತ್ತಿದ್ದು. ಇನ್ನು ಆವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ದೂರದ ಮಾತಾಗಿದೆ ಎಂದರು. ಅಧ್ಯಕ್ಷತೆಯನ್ನು ಕೃಪಾಶ್ರಯ ಟ್ರಸ್ಟ್ ನ ಫಾಸ್ಟ್ ರ್ ಕೆ. ಹಾಲೇಶ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ್ರ ಕೊಟ್ರುಗೌಡ. ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಉದಯಕುಮಾರ ಎಲಿವಾಳ. ಮಾತನಾಡಿದರು.ನಾಗತಿಬಸಾಪುರದ ಕಸ ವಿಲೇವಾರಿ ವಾಹನ ಚಾಲಕಿ ಕೆ. ಸುಧಾ,ಡಿ ಗ್ರೂಪ್ ನೌಕರ ಹೆಚ್ ಗಿರಿರಾಜ, ಪೌರ ಕಾರ್ಮಿಕ ಜಿ ಸೋಮಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕ ಹಡಗಲಿ ಬಸವರಾಜ. ಪತ್ರಕರ್ತ ಹಲಗಿ ಸುರೇಶ. ಬಿ. ಎಂ ದೊಡ್ಡ ಬಸಯ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ನಮ್ರತಾ, ರವಿತೇಜ ಪ್ರಾರ್ಥಿಸಿದರು.