ಲೋಕದರ್ಶನ ವರದಿ
ರಾಯಬಾಗ,20: ದೇಶವನ್ನು ಹೊಗೆಮುಕ್ತವನ್ನಾಗಿ ಮಾಡಲು ದೇಶದಲ್ಲಿರುವ ಬಡ ಹೆಣ್ಣು ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಉಜ್ವಲ ಪ್ಲಸ್ ಯೋಜನೆಯಡಿ ಸಿಲಿಂಡರ್ಗಳನ್ನು ವಿತರಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಂದು ಬಿಪಿಎಲ್ ಪಡಿತರದಾರರು ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ರವಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಉಜ್ವಲ ಪ್ಲಸ್ ಯೋಜನೆಯಡಿ 40 ಫಲಾನುಭವಿಗಳಿಗೆ ಸಿಲಿಂಡರ್ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಪ್ರಗತಿಪಥದಲ್ಲಿ ಕೊಂಡಯ್ಯುತ್ತಿದೆ. ರಾಜ್ಯದಲ್ಲಿಯೂ ಈ ಹಿಂದೆ ಮಾಜಿ ಸಿಎಮ್ ಯಡಿಯೂರಪ್ಪನವರ ನೇತೃತ್ವದಲ್ಲಿ ಅನೇಕ ಹೊಸ ಯೋಜನೆಗಳನ್ನು ತಂದು ರಾಜ್ಯವನ್ನು ಅಭಿವೃದ್ಧಿಗೊಳಿಸಿದ್ದರು. ಆದರೆ ಇಂದು ರಾಜ್ಯದಲ್ಲಿರುವ ಸಮೀಶ್ರ ಸರಕಾರ ರಾಜ್ಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.
ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಸದಾನಂದ ಹಳಿಂಗಳಿ, ಪ.ಪಂ.ಸದಸ್ಯ ಸುರೇಶ ಮಾಳಿ, ಸದಾನಂದ ಲೋಹಾರ, ಅನೀಲ ಸಾನೆ, ಮಹೇಶ ಕರಮಡಿ, ಯುನುಸ ಮುಲ್ಲಾ ಸೇರಿದಂತೆ ಫಲಾನುಭವಿಗಳು
ಇದ್ದರು.