ಸಂತ್ರಸ್ತರಿಗೆ ಪರಿಹಾರ ವಿತರಣೆ

ಸಂತ್ರಸ್ತರಿಗೆ ಪರಿಹಾರ ವಿತರಣೆ Distribution of compensation to victims

ಮುಗಳಖೋಡ 26: ಪಟ್ಟಣದ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರ ಸಂಘ ನಿಯಮಿತ ಯಕ್ಸಂಬಾ ಶಾಖೆ ಮುಗಳಖೋಡ ಪಟ್ಟಣದ ಜ್ಯೋತಿ ಸಂಸ್ಥೆಯಲ್ಲಿ ಶಕುಂತಲಾ ಕದಂ ಅವರು ಜ್ಯೋತಿ ಬ್ಯಾಂಕಿನಲ್ಲಿ ಕಿರು ಸಾಲ ಪಡೆದಿದ್ದರು. ಅವರ ಪತಿ ಸದಾಶಿವು ಮಂಚೇಂದ್ರ ಕದಂ ಅವರು ಆಕಾಲಿಕ ಮರಣ ಹೊಂದಿದ್ದರು. ಅವರಿಗೆ ನಮ್ಮ ಸದಸ್ಯರ ಕಲ್ಯಾಣ ನಿಧಿಯಿಂದ 75,000/ ರೂ  ಹಾಗೂ ರೇಣುಕಾ ರಾಮಚಂದ್ರ ಲಮಾಣಿ ಯವರು ಜ್ಯೋತಿ ಬ್ಯಾಂಕಿನಲ್ಲಿ ಕಿರು ಸಾಲ ಪಡೆದಿದ್ದರು.

ಇವರು ಹೃದಯಘಾತದಿಂದ ಮರಣ ಹೊಂದಿದ್ದು ಇವರಿಗೂ ಕೂಡ ಸದಸ್ಯರ ಕಲ್ಯಾಣ ನಿಧಿಯಿಂದ 30,000/ ರೂಗಳನ್ನು ಇವರ ವಾರಸುದಾರರಿಗೆ ಅಣ್ಣಾಸಾಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರ ಪರವಾಗಿ ಜ್ಯೋತಿ ಸಂಘದ ಸಲಹಾ ಸಮಿತಿ ಸದಸ್ಯರುಗಳಾದ ಕೆಂಪನ ಮೂಶಿ ಹಾಗೂ ಲತಾ ಹುದ್ದಾರ ಮತ್ತು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಕೇಶ್ ಬಂಗೆಣ್ಣವರ ಜ್ಯೋತಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗಳು ಇವರು ಸಮ್ಮುಖದಲ್ಲಿ ಪರಿಹಾರ ಧನ ವಿತರಿಸಲಾಯಿತು.