ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
People appreciate police security arrangements for houses built by BIG in Belgaum
ಬೆಳಗಾವಿ : ಬೆಳಗಾವಿ ನಗರ ಪೊಲೀಸ್ ಆಯುಕ್ತರು ನಗರದಲ್ಲಿ ಜಾರಿಗೆ ತಂದಿರುವ (ಲಾಕ್ಡ್ ಹೌಸ್ ಬೀಟ್ ಸಿಸ್ಟಂ’) ಬಿಗ್ ಹಾಕಿದ ಮನೆಗಳಿಗೆ ಪೊಲೀಸರ ಗಸ್ತು ಹಾಗೂ ಭದ್ರತೆ ವ್ಯವಸ್ಥೆಗೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಳಗಾವಿ ನಗರದಲ್ಲಿ ಪೊಲೀಸ ಆಯುಕ್ತರು ಜನೇವರಿ 26ರಿಂದ ಜಾರಿ ತಂದಿರುವ ಲಾಕ್ಡ್ ಹೌಸ್ ಬೀಟ್ ಸಿಸ್ಟಂ’ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮನೆಗಳಿಗೆ ಬಿಗ್ ಹಾಕಿ ಬೇರೆ ಊರುಗಳಿಗೆ ತೆರಳುವ ನಾಗರಿಕರು ಆಯಾ ಪೋಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಊರುಗಳಿಗೆ ತೆರಳಿದ್ದಲ್ಲಿ ಅಂತ ಮನೆಗಳ ವ್ಯಾಪ್ತಿಯಲ್ಲಿ ಪೊಲೀಸ ಗಸ್ತು ಹಾಗೂ ಭದ್ರತೆ ನೀಡುವ ಯೋಜನೆಯೆ ಲಾಕ್ಡ್ ಹೌಸ್ ಬೀಟ್ ಸಿಸ್ಟಂ’ ಆಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಕ್ಯಾಂಪ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಿಗ್ ಹಾಕಿದ ಮನೆಗಳ ಮುಂದೆ ಪೊಲೀಸ ಗಸ್ತು ಹೆಚ್ಚಿಸುವದು ಹಾಗೂ ಮನೆಗಳಿಗೆ ಭದ್ರತೆ ನೀಡುವ ಮೂಲಕ ಬೆಳಗಾವಿ ಪೊಲೀಸರು ಹೊಸ ವ್ಯವಸ್ಥೆ ಜೀವ ತುಂಬಿದ್ದರು.
ಬೆಳಗಾವಿ ಪೋಲಿಸ್ ಆಯುಕ್ತರ ಹಾಗೂ ಪೊಲೀಸರ ಈ ವ್ಯವಸ್ಥೆಗೆ ಬೆಳಗಾವಿ ನಾಗರಿಕರಿಂದ ಮೆಚ್ವುಗೆ ವ್ಯಕ್ತವಾಗಿದೆ. ಅಲ್ಲದೆ ಪೊಲೀಸರು ಮಾಡಿರುವ ವಾಹನ ಗಸ್ತು ವ್ಯವಸ್ಥೆಗೆ ಪೊಲೀಸರ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಗಳಿದ್ದಾರೆ.
ಅಸಾಧಾರಣ ವೇಗದ ಪ್ರತಿಕ್ರಿಯೆಗಾಗಿ ತುಂಬಾ ಧನ್ಯವಾದಗಳು. ಲಾಕ್‌ಔಟ್ ಆಗಿರುವುದು ತುಂಬಾ ಒತ್ತಡದಿಂದ ಕೂಡಿತ್ತು, ಆದರೆ ನಿಮ್ಮ ಸೇವೆ ಮತ್ತು ಪರಿಣತಿಯು ನಮ್ಮ ಮನೆಯ ಬಗ್ಗೆ ನಮಗೆ ಆಸಕ್ತಿ ಇರಲಿಲ್ಲ. ನಿಮ್ಮ ಸಹಾಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ.
ಬೀಟ್ ಸಿಬ್ಬಂದಿ ನಮ್ಮ ಬೀಗ ಹಾಕಿದ ಮನೆಯನ್ನು ಭೌತಿಕವಾಗಿ ಪರಿಶೀಲಿಸುತ್ತಿರುವ ಮತ್ತು ಹೆಚ್ಚುವರಿ ನಿಗಾ ಇಡುತ್ತಿರುವ ವೀಡಿಯೊವನ್ನು ನಾನು ಲಗತ್ತಿಸಿದ್ದೇನೆ. ನಿಮ್ಮ ಜಾಗರೂಕತೆಗೆ ಧನ್ಯವಾದಗಳು ಎಂದು ಹೇಳುವ ಮೂಲಕ ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ನಮ್ಮ ಮನೆಯು ಲಾಕ್ ಆಗಿದ್ದರಿಂದ ನಾವು ತುಂಬಾ ಆತಂಕದಲ್ಲಿದ್ದೆವು. ಆದರೆ ನಿಮ್ಮ ಸೇವೆ ಮತ್ತು ಪರಿಣತಿಯಿಂದ ನಮ್ಮ ಮನೆ ಬಗ್ಗೆ ಯಾವುದೇ ಚಿಂತೆ ಉಳಿಯಲಿಲ್ಲ. ನಿಮ್ಮ ಸಹಾಯಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.
ನಮ್ಮ ಲಾಕ್ ಮಾಡಿದ ಮನೆಯನ್ನು ಬೀಟ್ ಸಿಬ್ಬಂದಿ ಸ್ವತಃ ಪರಿಶೀಲನೆ ನಡೆಸಿ, ಹೆಚ್ಚುವರಿ ನಿಗಾವಹಿಸುತ್ತಿರುವ ವಿಡಿಯೋವನ್ನು ಕೂಡ ಜೋಡಿಸಿದ್ದೇನೆ. ನಿಮ್ಮ ಎಚ್ಚರಿಕೆ ಮತ್ತು ಜಾಗರೂಕತೆಗೆ ಧನ್ಯವಾದಗಳು ಎಂದು ನಾಗರಿಕರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ 