ಮೃತರ ಕುಟುಂಬಕ್ಕೆ ಶಾಸಕರಿಂದ ಪರಿಹಾರ ಚೆಕ್ ವಿತರಣೆ

ಹಾವೇರಿ:ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ತಾಲೂಕಿನ ಅಗಡಿ ಗ್ರಾಮದ ಹಳ್ಳಿದಲ್ಲಿ ಕೊಚ್ಚಿಹೋಗಿ ಮೃತಪಟ್ಟ ಹಾಗೂ ಹಂದಿಗನೂರ ಗ್ರಾಮದಲ್ಲಿ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತ ಪಟ್ಟವರ ಕುಟುಂಬಗಳಿಗೆ ಶಾಸಕರಾದ ನೆಹರು ಓಲೇಕಾರ ಅವರು ತಲಾ ನಾಲ್ಕು ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಶಾಸಕರು ಶನಿವಾರ ಅಗಡಿ  ಗ್ರಾಮಕ್ಕೆ ತೆರಳಿ ಸುಭಾಷ ಬೆನ್ನೂರ ಅವರ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಹಾಗೂ ಹಂದಿಗನೂರ ಗ್ರಾಮಕ್ಕೆ ತೆರಳಿ ಪ್ರಶಾಂತ ಕೊಂಚಿಗೇರಿ ಮತ್ತು ಪರಮೇಶಪ್ಪ ಕಮ್ಮಾರ ಅವರ ಕುಟುಂಬಕ್ಕ ತಲಾ ನಾಲ್ಕು ಲಕ್ಷ ರೂ.ಗಳ ಚೆಕ್ನ್ನು ವಿತರಿಸಿ ಸಾಂತ್ವಾನ ಹೇಳಿದರು.