ಹುಟ್ಟು ಹಬ್ಬದ ನಿಮಿತ್ಯ ಬಡವರಿಗೆ ದವಸಧಾನ್ಯ ವಿತರಣೆ

ಲೋಕದರ್ಶನ ವರದಿ

ಮುಗಳಖೋಡ 10: ಸಮೀಪದ ಕಂಕಣವಾಡಿ ಗ್ರಾಮದ ತಾ.ಪಂ ಸದಸ್ಯರಾದ ಅಜರ್ುನ ನಾಯಕವಾಡಿ, ಅವರ ಧರ್ಮಪತ್ನಿ ಜಿ.ಪಂ ಮಾಜಿ ಉಪಾಧ್ಯಕ್ಷೆ ತೇಜಶ್ವಿನಿ ಅಜರ್ುನ ನಾಯಕವಾಡಿ ಅವರು ತಮ್ಮ ಮೊಮ್ಮಗನ ಹುಟ್ಟುಹಬ್ಬವನ್ನು ಸಾಮಾಜಿಕ ಅಂತರದೊಂದಿಗೆ ಬಹಳ ವಿಶಿಷ್ಠವಾಗಿ ಆಚರಿಸಿದ್ದಾರೆ. ಕಂಕಣವಾಡಿ ಗ್ರಾಮದಲ್ಲಿ ಜೋಪಡದಲ್ಲಿ ವಾಸವಾಗಿದ್ದ ಮತ್ತು  ಕಡುಬಡವರಿಗೆ ಸುಮಾರು 200 ಕೆ.ಜಿ ಗೋವಿನ ಜೋಳ, ದಿನಸಿ ಸಾಮಗ್ರಿಗಳು ಸೇರಿದಂತೆ ವಿವಿಧ ಪದಾರ್ಥಗಳನ್ನು 200 ಕುಟುಂಬಗಳಿಗೆ ವಿತರಿಸಿ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಜಿ.ಪಂ ಮಾಜಿ ಸದಸ್ಯ ತೇಜಶ್ವ್ವಿನಿ ನಾಯಕವಾಡಿ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಮಹಾಮಾರಿ ಕರೋನ ವೈರಸ ಇರುವದರಿಂದ ನಮ್ಮ ಮೊಮ್ಮಗನ ಹುಟ್ಟುಹಬ್ಬ ದೊಡ್ಡ ಪ್ರಮಾಣದಲ್ಲಿ ಆಚರಿಸಲು ಆಗಲಿಲ್ಲ ಸಣ್ಣಪ್ರಮಾಣದಲ್ಲಿ ಸಾಮಾಜಿಕ ಅಂತರದೊಂದಿಗೆ ಕಡುಬಡವರಿಗೆ ದವಸ ಧಾನ್ಯಗಳನ್ನು ಕೊಟ್ಟು ಹುಟ್ಟು ಹಬ್ಬವನ್ನು ಆಚರಿಸಿದ್ದೇವೆ ಎಂದು ಹೇಳಿದರು.