ಬಾಗಲಕೋಟೆ: ಕರ್ತವ್ಯದ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ 11 ಜನ ಪೋಲೀಸ್ ಸಿಬ್ಬಂದಿಗಳಿಗೆ ಹಾಗೂ ಒಬ್ಬ ಲಿಪಿಕ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಪ್ರಶಂಸನಾ ಪತ್ರ ವಿತರಿಸಿದರು.
ನವನಗರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದ ಅವರು ಗುಪ್ತ ಮಾಹಿತಿ ಸಂಗ್ರಹಿಸುವಲ್ಲಿ, ಅಪರಾಧವನ್ನು ಪತ್ತೆ ಹಚ್ಚುವಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಪೋಲೀಸ್ ಕಾರ್ಯಗಳಲ್ಲಿ ಜನಸ್ನೇಹಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಇದೇ ರೀತಿ ಎಲ್ಲ ಸಿಬ್ಬಂದಿಗಳು ಉತ್ತಮ ಕಾರ್ಯನಿರ್ವಹಣೆ ಮಾಡುವ ಮೂಲಕ ಮುಂದಿನ ಪ್ರಶಸ್ತಿಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವ್ಹಿ.ಬಿ.ಕಲಾದಗಿ, ವ್ಹಿ.ಬಿ.ಹಾದಿಮನಿ, ಶ್ರೀಕಾಂತ ಸೊನ್ನದ, ಎಸ್.ಸಿ. ಕೌಲಗಿ, ಬಿ.ವ್ಹಿ. ಹಿರೇಮಠ, ವ್ಹಿ.ಬಿ.ಕುನ್ನಳ್ಳಿ, ಎನ್.ಡಿ.ಸಂತಿವೂರ, ಎಲ್.ಎಚ್.ಬಾಳಿಕಾಯಿ, ಆರ್.ಬಿ.ಕಟಗೇರಿ, ಎಂ.ಎಸ್.ಹುಲ್ಲೂರು, ಎಸ್.ವ್ಹಿ.ಶಿರಬೂರ, ಮಂಜುನಾಥ ಜಾಡರ ಅವರಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.