ಲೋಕದರ್ಶನವರದಿ
ರಾಣೇಬೆನ್ನೂರು23: ತಾಲೂಕಿನ ಅಂಕಸಾಪುರ ಗ್ರಾಮದ ದುಗರ್ಾದೇವಿ ದೇವಸ್ಥಾನದಲ್ಲಿ ರವಿವಾರ ಸ್ಥಳೀಯ ಕನರ್ಾಟಕ ರಾಜ್ಯ ಕಟ್ಟಡ ಹಾಗೂ ಇತರೆ ಕಾಮರ್ಿಕರ ಸೇವಾ ಸಂಘವು ಕಾಮರ್ಿಕರಿಗಾಗಿ ಗುರುತಿನ ಕಾಡರ್್ಗಳನ್ನು ವಿತರಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದಶರ್ಿ ಜೆ.ಲೋಕೇಶ್ ನಾಯಕ ಮಾತನಾಡಿ ಕಾಮರ್ಿಕರು ನಿತ್ಯವೂ ಶ್ರಮಿಕರಾಗಿದ್ದಾರೆ. ಸಂಘಟನೆಯ ಕೊರತೆಯಿಂದಾಗಿ ಜಿಲ್ಲೆಯೂ ಸೇರಿದಂತೆ ನಾಡಿನಾದ್ಯಾಂತ ತಮಗಿರುವ ಯೋಜನೆಗಳು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಾಮರ್ಿಕರಿಗಾಗಿಯೇ ಸಕರ್ಾರ ಅನೇಕ ಸೌಲತ್ತುಗಳನ್ನು ಒದಗಿಸುತ್ತಲಿದೆ.
ಅದನ್ನು ಪಡೆಯಬೇಕಾದರೆ ಸಂಘಟನೆ ಬಹುಮುಖ್ಯ. ಕಾಮರ್ಿಕರು ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದಶರ್ಿ ರೇಣುಕಾ ಲಮಾಣಿ, ಸಮಿತಿಯ ರೇಖಾ ಜಯಪ್ಪ, ಖಜಾಂಚಿ ಬಿ.ಎಸ್.ನಾಗರಡ್ಡಿ, ಆನಂದಪ್ಪ ಉಬ್ಬೇಪ್ಪ ಸೇರಿದಂತೆ ಸಮಿತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು