ಲೋಕದರ್ಶನ ವರದಿ
ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ ಹಣ್ಣು, ಹಾಲು ವಿತರಣೆ
ಕಂಪ್ಲಿ 27: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪ 88ನೇ ಹುಟ್ಟು ಹಬ್ಬದ ನಿಮಿತ್ತ ತಾಲೂಕು ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ ಹಣ್ಣು, ಹಂಪಲು ಗುರುವಾರ ವಿತರಿಸಿದರು.
ನಂತರ ಸಿ.ಡಿ.ಮಹಾದೇವ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಉತ್ತುಂಗಕ್ಕೆ ತಂದಂತಹ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪ 3ಸಲಇವರು ಅಂದಿನ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಹಲವು ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ರೈತರಿಗಾಗಿಯೇ ದೇಶದಲ್ಲಿ ಮೊದಲ ಕೃಷಿ ಬಜೆಟ್ ಆರಂಭಿಸಿದ ಕೀರ್ತಿ ಯಡಿಯೂರ್ಪ ಅವರದು. ಜತೆಗೆ ರಾಜ್ಯದಲ್ಲಿ ಮೊದಲ ಬಾರಿ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಯೋಜನೆ ಜಾರಿ ಮಾಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ವಿತರಣೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಕಡು ಬಡವರಿಗಾಗಿ ಮಾಸಿಕ 400 ರೂ ಪಿಂಚಣಿ ಅನುಷ್ಠಾನ. ಸರಕಾರಿ ಮತ್ತು ಸರಕಾರೇತರ ಅನುದಾನಿತ ಶಾಲೆಗಳ ಮಕ್ಕಳಿಗೆ ಸೈಕಲ್ ವಿತರಣೆ. ಹೀಗೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ನೀಡಿದ್ದಾರೆ.
ಮಾನ್ಯ ಯಡಿಯೂರ್ಪ ಅವರು ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಬಳ್ಳಾರಿಯಲ್ಲಿ ಎಸ್ಸಿ .ಎಸ್ಟಿ ಬಗ್ಗೆ ಹೋರಾಟ ಇದೆ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು ಎಂದರು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಾ.ವಿ.ಎಲ್.ಬಾಬು, ಆರ್.ಆಂಜನೇಯ, ಸುದರ್ಶನರೆಡ್ಡಿ, ಹೂಗಾರ ರಮೇಶ, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ಮುಖಂಡರಾದ ಮುರಳಿ ಮೋಹನ್ ರೆಡ್ಡಿವಿದ್ಯಾಧರ, ಎಸ್.ಚಂದ್ರಶೇಖರಗೌಡ, ರಮೇಶ, ಗುರುರಾಜ, ವಿಪ್ರದ ಭೀಮೇಶ, ವಿರೂಪಾಕ್ಷಿ, ರಂಗಪ್ಪ, ವಿಶ್ವನಾಥ, ರಬಿಯಾ ನಿಸಾರ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.