ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ: ಮೇಲ್ವಿಚಾರಕಿ ಸಾವಿತ್ರಿ

Distribution of Uniforms to Anganwadi Children: Superintendent Savitri

ದೇವರಹಿಪ್ಪರಗಿ 12: ಭವ್ಯ ಭಾರತದ ಭವಿಷ್ಯ ಅಂಗನವಾಡಿ ಮಕ್ಕಳಿಂದ ಪ್ರಾರಂಭವಾಗುತ್ತದೆ. ಇಂತಹ ಮಕ್ಕಳ ಭವಿಷ್ಯವು ಉಜ್ವಲವಾಗಬೇಕು ಎಂದು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸಾವಿತ್ರಿ ಬಾತಖಾನಿ ಹೇಳಿದರು. 

ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಗುರುವಾರದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಪಂ ಹಾಗೂ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಗ್ರಾಪಂ ನಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಮಾತನಾಡಿದ ಅವರು,ಜಿಲ್ಲೆಯಲ್ಲಿಯೇ ​‍್ರ​‍್ರಥಮವಾಗಿ ಗ್ರಾಮದ 3 ಮಾದರಿ ಅಂಗನವಾಡಿಗಳಲ್ಲಿ  ಮಕ್ಕಳ ಚಟುವಟಿಕೆ, ನೃತ್ಯ,  ಹಾಡು, ರಸಪ್ರಶ್ನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ನೋಡಿ ತುಂಬಾ ಸಂತೋಷವಾಯಿತು. ಅದಕ್ಕಾಗಿ ನನ್ನ ವ್ಯಯಕ್ತಿಕವಾಗಿ 3ಕೇಂದ್ರದ ಎಲ್ಲಾ ಮಕ್ಕಳಿಗೆ ಸಮವಸ್ತ್ರ ಕೊಡುತ್ತಿದ್ದೆನೆ.ಇದು ಯಾವ ಸರ್ಕಾರೇತರ ಶಾಲೆಗಳಿಗೆ ಕಡಿಮೆ ಇಲ್ಲ ಇಲ್ಲಿಯ ಅಂಗನವಾಡಿಯ ಕಾರ್ಯಕರ್ತೆರ ಮತ್ತು ಸಹಾಯಕಿಯರ ಪಾತ್ರ ಬಹಳ ಮಹತ್ವದ್ದು ಅವರಿಗೆ ಅಭಿನಂದನೆಗಳು ಎಂದು ಹೇಳಿದರು.   

ಉಜ್ವಲ ಸಂಸ್ಥೆಯ ತಾಲೂಕ ಸಂಯೋಜಕರಾದ ಸಾಗರ ಘಾಟಗೆ ಮಾತನಾಡುತ್ತಾ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಉತ್ತಮ ಮಟ್ಟದಲ್ಲಿ ಮಾಡುತ್ತಿದ್ದು ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪ್ರಸ್ತುತ ಮಕ್ಕಳಲ್ಲಿ ಕಾಣಬಹುದು ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಮಕ್ಕಳೊಂದಿಗೆ ಸರಿ ಸಮಾನವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ, ಮಕ್ಕಳ ತಳಪಾಯ ಬಲಪಡಿಸಬೇಕಾದರೆ ಶಾಲಾ ಪೂರ್ವ ಶಿಕ್ಷಣ ಅವಶ್ಯಕ ಎಂದರು.ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಮ್‌.ಎಮ್‌. ಬಗಲಿ ಅವರು ಮಾತನಾಡುತ್ತಾ  ಪ್ರಸ್ತುತ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಜೊತೆಗೆ ಶಾಲಾ ಪೂರ್ವ ಶಿಕ್ಷಣಕ್ಕೆ ಬಹಳ ವತ್ತು ನೀಡುತ್ತಿದ್ದು.ಇದರಿಂದ ಮಕ್ಕಳ ತಳಪಾಯ ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತಿದೆ, ಸಮವಸ್ತ್ರ ವಿತರಿಸಿದ ಮೇಲ್ವಿಚಾರಕರಿಗೆ ಹಾಗೂ ಉಜ್ವಲ ಸಂಸ್ಥೆಯ ಕಾರ್ಯ ಬಹಳ ಪ್ರಶಂಸೆಯಾಗಿದೆ. ಅಂಗನವಾಡಿಗೆ ನಮ್ಮ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ವೇದಿಕೆ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಬೋರಮ್ಮ ಭಜಂತ್ರಿ ಇದ್ದರು. 

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಸುರೇಖಾ ಹಿರೇಮಠ, ಶೈನಾಜ ತಾಂಬೋಳಿ, ಭೀಮಬಾಯಿ ಹೇರೂರ , ತಾಯಂದಿರು, ಪಾಲಕರು ಮತ್ತು ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿದರು.  ಕಾರ್ಯಕ್ರಮದ ನಿರೂಪಣೆ ಅಕ್ಕಮ್ಮ ಬಿರಾದಾರ, ಕಸ್ತೂರಿ ಹಿಪ್ಪರಗಿ ಸ್ವಾಗತಿಸಿದರು ಹಾಗೂ ಬೇಬಿ ಪಾಟೀಲ ವಂದಿಸಿದರು.