ಬಾಗಲಕೋಟೆ: ಮೈಸೂರು ನಗರ ಕ್ಲಬ್ ವೇದಿಕೆ ವತಿಯಿಂದ ಜಿಲ್ಲೆಗೆ ಬಾದಾಮಿ ತಾಲೂಕಿನ ಪಟ್ಟದಕಲ್ಲ ಗ್ರಾಮದ ಸಂತ್ರಸ್ತರಿಗೆ ಕಿಚನ್ ಕಿಟ್ಗಳನ್ನು ಶನಿವಾರ ವಿತರಣೆ ಮಾಡಲಾಯಿತು.
ಮೈಸೂರಿನ ದಿ ಕಾಸ್ಮೋಪಾಲಿಥನ್ ಕ್ಲಬ್, ದಿ ಒಂಟಿಕೊಪ್ಪಲ್ ಕ್ಲಬ್, ವಿಜಯನಗರ ಸ್ಪೋಟ್ಸ್ ಕ್ಲಬ್ ಹಾಗೂ ದಿ ಹೆರಿಟೇಜ್ ಕ್ಲಬ್ ವತಿಯಿಂದ ಕನರ್ಾಟಕದ ಪ್ರವಾಹ ಸಂತ್ರಸ್ತರಿಗೆ ಪಾತ್ರೆ ಮತ್ತು ಟೆಂಟ್ಗಳ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು.
ಈ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರಿಗೂ ಸಹ ಕಿಚನ್ ಕಿಟ್ಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಸಂತ್ರಸ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕಿಚನ್ ಕಿಟ್ನಲ್ಲಿ ಪ್ಲಾಸ್ಟಿಕ್ ಬಕೀಟ್, ಜಗ್, ಲೋಟಾ, ಊಟದ ತಟ್ಟೆಗಳು, ಬೋಗಾನಿ ಹಾಗೂ ಚಮಚ ಒಳಗೊಂಡಿದೆ. ಇಂತಹ ಒಟ್ಟು 780 ಕಿಟ್ಗಳನ್ನು ಪಟ್ಟದಕಲ್ಲ ಸಂತ್ರಸ್ತರಿಗೆ ಕ್ಲಬ್ನ ಸದಸ್ಯರು ವಿತರಿಸಿದರು.
ಈ ಕಾರ್ಯಕ್ಕೆ ಸಹಾಯವಾಗುವ ದೃಷ್ಠಿಯಿಂದ ಜಿಲ್ಲಾಡಳಿತದ ವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ, ಪಂಚಾಯತ ರಾಜ್ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.