ಬಾಗಲಕೋಟೆ07: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಸಾಲ(ಬೆಳೆಸಾಲ) ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಫೆಬ್ರವರಿ 24 ರೊಳಗೆ ಒಂದು ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ(ಬೆಳೆಸಾಲ) ಈ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್ಗಳ ಮೂಲಕ ವಿತರಿಸುವ ಕಾರ್ಯ ಕೈಗೊಂಡಿದೆ ಎಂದರು.
ಪಿ.ಎಂ ಕಿಸಾನ್ ಯೋಜನೆಯಡಿಯಲ್ಲಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರಿಡಿಟ್ ಪಡೆದಿದ್ದಾರೆ. 2.47 ಕೋಟಿ ಫಲಾನುಭವಿಗಳು ಲಾಭ ಪಡೆಯದೇ ಬಾಕಿ ಉಳಿದಿರುತ್ತಾರೆ. ಕೇಂದ್ರ ಸರಕಾರ ನಿಗದಿಪಡಿಸಿದ ದಿನಾಂಕದೊಳಗೆ ಗುರಿ ಸಾಧಿಸಲು ನಿದರ್ೇಶನ ನೀಡಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ 194605 ಜನ ರೈತರು ನೋಂದಾಯಿಸಿದ್ದು, ಈ ಪೈಕಿ 184981 ಪ್ರಸ್ತಾವನೆಗಳನ್ನು ಕೇಂದ್ರ ಸರಕಾರದಿಂದ ಅನುಮೋದನೆಗೊಂಡಿವೆ. ಇಲ್ಲಿಯವರೆಗೆ ಒಟ್ಟು 105.40 ಕೋಟಿ ರೂ. ರೈತರ ಖಾತೆಗೆ ಜಮಾ ಆಗಿದೆ. ಮೊದಲನೆ ಕಂತಿನಲ್ಲಿ 182666 ಫಲಾನುಭವಿಗಳಿಗೆ ಒಟ್ಟು 36.53 ಕೋಟಿ, 2ನೇ ಕಂತಿನಲ್ಲಿ 176407 ಫಲಾನುಭವಿಗಳಿಗೆ ಒಟ್ಟು 35.28 ಕೋಟಿ, 3ನೇ ಕಂತಿನಲ್ಲಿ 142113 ಫಲಾನುಭವಿಗಳಿಗೆ ಒಟ್ಟ ರೂ.28.42 ಕೋಟಿ ಹಾಗೂ 4ನೇ ಕಂತಿನಲ್ಲಿ 25818 ಫಲಾನುಭವಿಗಳಿಗೆ 5.16 ಕೋಟಿ ರೂ. ಜಮಾ ಮಾಡಲಾಗಿದೆ ಎಂದರು.
ರಾಜ್ಯ ಸರಕಾರದಿಂದ ಈ ಯೋಜನೆಯಡಿ ಒಟ್ಟು 112999 ರೈತ ಫಲಾನುಭವಿಗಳಿಗೆ ಒಟ್ಟು 22.60 ಕೋಟಿ ರೂ.ಗಳನ್ನು ರೈತರ ಖಾಗೆಗಳಿಗೆ ಜಮಾ ಮಾಡಲಾಗಿದೆ. ಸಹಕಾರಿ ಸಂಘಗಳು ರೈತರಿಗೆ ಹೆಚ್ಚಿನ ಸಾಲ ನೀಡಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಕನರ್ಾಟಕ ರಾಜ್ಯದಲ್ಲಿ ಹೆಚ್ಚಿಗೆ ಇದೆ ಎಂದರು. ಜನವರಿ-2020 ಅಂತ್ಯಕ್ಕೆ ಅಲ್ಪಾವಧಿ ಬೆಳೆಸಾಲಕ್ಕೆ 25600 ವಾಷರ್ಿಕ ಗುರಿ ಪೈಕಿ 192128 ಫಲಾನುಭವಿಗಳಿಗೆ ವಿತರಿಸಲಾಗಿದೆ. ಮಧ್ಯಮಾವಧಿ ಕೃಷಿ ಸಾಲಕ್ಕೆ 1000 ಗುರಿ ಇದ್ದು, ಈ ಪೈಕಿ 723 ರೈತ ಫಲಾನುಭವಿಗಳಿಗೆ ವಿತರಿಸಿರುವುದಾಗಿ ತಿಳಿಸದರು.
ಜಂಟಿ ಕೃಷಿ ನಿದರ್ೇಶಕಿ ಚೇತನಾ ಪಾಟೀಲ ಮಾತನಾಡಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ರೈತರಿಗೆ ಪಿಂಚಣಿ ರೂಪಿಸಿದ್ದು, 60 ವರ್ಷ ವಯಸ್ಸು ತುಂಬಿದ ನಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ ಕನಿಷ್ಠ 3 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಗರಿಷ್ಠ 2 ಹೆಕ್ಟೇರ್ ಸಾಗುವಳಿ ಭೂಮಿ ಹೊಂದಿರುವ 18-40 ವರ್ಷದೊಳಗಿನ ಎಲ್ಲ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು. ಈ ಯೋಜನೆಯಡಿ ಜಿಲ್ಲೆಯಲ್ಲಿ 496 ರೈತರು ನೊಂದಾಯಿಸಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಅಗ್ರಣಿ ಬ್ಯಾಂಕನ್ ವ್ಯವಸ್ಥಾಪಕ ಗೋಪಾಲರೆಡ್ಡಿ, ಪ್ರಾದೇಶಿಕ ವ್ಯವಸ್ಥಾಪಕ ಸತೀಶ ಬಾಬು, ಕೆವಿಜಿ ಬ್ಯಾಂಕ್ನ ಮ್ಯಾನೇಜರ್ ರಮೇಶ ಯಡಹಳ್ಳಿ, ಭಾರತೀಯ ಸ್ಟೇಟ್ ಬ್ಯಾಂಕನ್ ರಿಜಿನಲ್ ಮ್ಯಾನೇಜರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.