ಲೋಕದರ್ಶನವರದಿ
ರಾಣೇಬೆನ್ನೂರು16: ವಿಕಲಚೇತನರಿಗೆ ಅನುಕಂಪ ತೋರದೆ ಸಹಾಯಹಸ್ತ ನೀಡಿದಾಗ ಅವರೂ ಸಹ ಸ್ವಾವಲಂಭನೆಯ ಬದುಕು ಸಾಗಿಸಲು ಸಾಧ್ಯ ಎಂದು ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ ಹೇಲಿದರು.
ಮಾಕನೂರ ಗ್ರಾಮದ ಅಂಗವಿಕಲರ ಅನುದಾನದಲ್ಲಿ ಗ್ರಾಪಂ ವತಿಯಿಂದ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ಖರೀದಿಸಲಾದ ಸುಮಾರು 55 ಪ್ಯಾನ್ಗಳನ್ನು ಅಂಗವಿಕಲರಿಗೆ ವಿತರಿಸಿ ಮಾತನಾಡಿದ ಅವರು, ಗ್ರಾಪಂನಿಂದ ಖರೀದಿಸಿದ ಈ ವಸ್ತುಗಳನ್ನು ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಅಂಗವಿಕಲರಿಗೆ ವಿಶೇಷ ಯೋಜನೆಗಳಲ್ಲಿ ವಸ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ರತ್ನಮ್ಮ ಬಣಕಾರ, ಸದಸ್ಯರಾದ ಗೀತಾ ಮಡಿವಾಳರ, ನಾಗಪ್ಪ ಬಾಕರ್ಿ, ಪದ್ಮಾ ನೇಕಾರ, ತಿಪ್ಪೇಶಿ ಯಲಜಿ, ಪ್ರೇಮಕ್ಕ ಮುದಿಗೌಡ್ರ, ಶಾರದಮ್ಮ ಹುಚ್ಚಣ್ಣನವರ, ಮಲ್ಲಿಕಾಜರ್ುನಪ್ಪ ಹಲಗೇರಿ, ರೇಣುಕಾ ಉಮ್ಮಪ್ಪನವರ, ಕರಬಸಪ್ಪ ಸಾಥರ್ಿ, ಭಾಗ್ಯ ಸಣ್ಣೇರ, ಅಶೋಕ ಸಾವಂತ, ಪಿಡಿಓ ಗಾಯತ್ರಾ ಹೊಸಂಗಡಿ, ಕಾರ್ಯದಶರ್ಿ ಚಂದ್ರಪ್ಪ ಬೇವಿನಮರದ, ಅಕೌಂಟೆಂಟ್ ರಮೇಶ ನಲ್ಲೂರ, ಸುರೇಶ ಹೊರಕೇರಿ, ನಾಗಪ್ಪ ಪೂಜಾರ, ಕರಬಸನಗೌಡ ಭರಮಗೌಡ್ರ, ನಿಂಗಪ್ಪ ತಾವರಗೊಂದಿ, ರಾಮಪ್ಪ ಆನಂದಿ, ಮರಿದೇವ ಉಮ್ಮಪ್ಪನವರ ಸೇರಿದಂತೆ ಫಲಾನುಭವಿಗಳು ಇದ್ದರು.