ಸಚೀನ ಇಂಡಿ ಇವರಿಗೆ ಬಸವ ರತ್ನ ಪ್ರಶಸ್ತಿ ವಿತರಣೆ

Distribution of Basava Ratna Award to Sachin Indi

ಇಂಡಿ 27: ಸಿಂದಗಿ ತಾಲ್ಲೂಕಿನ ಸುಕ್ಷೇತ್ರ ಹಿಕ್ಕನಗುತ್ತಿ ಗ್ರಾಮದ ಶ್ರೀ ಲಿಂಗಾಯತ ಮಾಹಾಮಠದ ವತಿಯಿಂದ ಪ್ರತಿ ವರ್ಷ ಕೂಡಲು ಪಡುವ ಶ್ರೀ ಬಸವ ರತ್ನ ಪ್ರಶಸ್ತಿಯನ್ನು ಈ ಬಾರಿ 2024-25 ನೇ ಸಾಲಿನ ಬಸವ ರತ್ನ ಪ್ರಶಸ್ತಿಯನ್ನು ಲೋಕದರ್ಶನ ದಿನ ಪತ್ರಿಕೆಯ ಇಂಡಿ ತಾಲೂಕು ಬಿಡಿ ವರದಿಗಾರ ಹಾಗೂ ವಸ್ತು ನಿಷ್ಠ ಬರಗಾರ, ಸಮಾಜ ಸೇವಕ, ದಕ್ಷ ಪ್ರಾಮಾಣಿಕ ವರದಿಗಾರ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಸಚೀನ ಎಸ್ ಇಂಡಿ ಇವರಿಗೆ ನೀಡಲಾಗಿದೆ  

ಇದೇ ದಿ. 25ರಂದು ಹಿಕ್ಕನಗುತ್ತಿ ಲಿಂಗಾಯತ ಮಾಹಾ ಮಠದ ಆವರಣದಲ್ಲಿ ಶ್ರೀ ಕೂಡಲಸಂಗಮದ ಬಸವ ಧರ್ಮಪೀಠ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮಹಾ  ಜಗದ್ಗುರುಗಳಾದ ಗಂಗಾದೇವಿ ಯವರು ಈ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. 

ಈ ಸಮಾರಂಭದಲ್ಲಿ ಪರಮ ಪೂಜ್ಯ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಮಾಹಾಸ್ವಾಮಿಗಳು ಕೂಡಲಸಂಗಮ. ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಮಾಹಾ ಸಂಸ್ಥಾನದ ಮಠದ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಾಹಾ ಸ್ವಾಮಿಗಳು, ಮನಗೂಳಿಯ ವಿರತಿಶಾನಂದ ಪೂಜ್ಯರು, ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ, ಹಿಕ್ಕನಗುತ್ತಿ ಲಿಂಗಾಯತ ಮಾಹಾಮಠದ ಪೂಜ್ಯ ಶ್ರೀ ಪ್ರಭುಲಿಂಗ ಶರಣರು,ತಾರಾಪೂರದ ಶ್ರೀ ಮುರಳಿ ಮುತ್ಯಾ, ರಾಂಪುರ ಅಮೀರಹ್ಮಜಾ ಮುಜಾವರ, ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವಿ ಎಚ್ ಬಿರಾದಾರ, ಸಿಂದಗಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಂಗರಗಿ, ಸೋಲ್ಲಾಪೂರದ ಪ್ರಥಮ ದರ್ಜೆ ಗುತ್ತಿಗೆದಾರರಾದ ಪರಮಾನಂದ ಅಲಗೊಂಡ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಶ್ರೀ ಕ್ಷೇತ್ರಿ, ನಾನಾಗೌಡ ಪಾಟೀಲ, ಮಾಹಾತೇಶ ಮೂಲಿಮನಿ, ನಿಂಗನಗೌಡ ಪಾಟೀಲ, ಈರಣ್ಣ ಗೋಟ್ಯಾಳ, ಸಿಂದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.