ಮಂಡ್ಯದಿಂದ ಜಿಲ್ಲೆಯ ನೆರೆ ಸಂತ್ರಸ್ತರಿಗೆ 4,200 ಕ್ವಿಂಟಲ್ ಅಕ್ಕಿ ವಿತರಣೆ

ಹಾವೇರಿ: ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮಂಡ್ಯ ಜಿಲ್ಲೆಯಿಂದ 4,200 ಕ್ವಿಂಟಲ್ ಅಕ್ಕಿ, 1000 ಸೀರೆಗಳು ಹಾಗೂ 170 ವಿವಿಧ ರೀತಿಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರ ಕಾಳಜಿಯಿಂದ ಮಂಡ್ಯ ಜಿಲ್ಲೆಯ ವಿವಿಧ ದಾನಿಗಳಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಹಾವೇರಿಗೆ ಜಿಲ್ಲೆಗೆ ಕಳುಹಿಸಿದ್ದಾರೆ. ಜಿಲ್ಲೆಯ ನೆರೆಪೀಡಿತ ಕರ್ಜಗಿ, ಮಂಟಗಣಿ, ಹಿರೇಮುಗದೂರ, ಚಿಕ್ಕಮುಗದೂರ, ಹರಳಿಹಳ್ಳಿ ಹಾಗೂ ನದಿ ನೀರಲಗಿ ಗ್ರಾಮಗಳ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಜಿಲ್ಲೆಯ ಅಧಿಕಾರಿಗಳು ವಿತರಿಸಿದ್ದಾರೆ.