ಬಕೇಟ್ಗಳ ವಿತರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಕಾಗವಾಡ 12: ಕಾಗವಾಡ ತಾಲೂಕಿನ ಏಕೈಕ್ಯ ಮಂಗಸೂಳಿ ಗ್ರಾಮ ಪಂಚಾಯತಿಯ 3,000 ಕುಟುಂಬಗಳಿಗೆ ರಾಜ್ಯ ಸಕರ್ಾರ 10 ಲಕ್ಷರೂ. ವೆಚ್ಚದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ಸ್ಥಾಪಿಸಿ ಹಸಿ ಮತ್ತು ಒಣ ತ್ಯಾಜ್ಯ ವಸ್ತುಗಳು ಸಂಗ್ರಹಿಸಲು ಬಕೇಟ್ಗಳು ವಿತರಿಸುವ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷ ಅಮರ ಪಾಟೀಲ, ಸದಸ್ಯರು ಮತ್ತು ಪಿಡಿಓ ಮಾಡಿದರು.

ಮಂಗಳವಾರರಂದು ಮಂಗಸೂಳಿ ಗ್ರಾಮದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಾಹಿತ್ಯ ಸಂಗ್ರಹಿಸಲು ಬಕೇಟ್ಗಳು ವಿತರಿಸಿದರು. ಸಕರ್ಾರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇವರು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಈ ಘಟಕ ಪ್ರಾರಂಭಿಸಲು 20 ಲಕ್ಷರೂ. ಮಂಜೂರುಗೊಳಿಸಿ. ಅದರಲ್ಲಿಯ 10 ಲಕ್ಷರೂ. ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲೂಕ್ಕುಗಳಲ್ಲಿ 7 ಘಟಕ ಮಂಜೂರುಗೊಳಿಸಿದ್ದಾರೆ. ಕಾಗವಾಡ ತಾಲೂಕಿನಲ್ಲಿ ಮಂಗಸೂಳಿ ಗ್ರಾಮವನ್ನು ಆಯ್ಕೆಮಾಡಿದ್ದಾರೆ. 

3 ಸಾವಿರ ಕುಟುಂಬಗಳಿಗೆ ಬಕೇಟ್ಗಳು ವಿತರಿಸಿ, ಸಂಗ್ರಹಿಸಿದ್ದ ತ್ಯಾಜ್ಯ ವಸ್ತುಗಳು ಸಾಗಾಟ ಮಾಡಲು ವಾಹನ ಖರಿದಿಸಲಿದ್ದಾರೆ. ಮತ್ತು ಗೊಬ್ಬರ ತಯಾರಿಸುವ ಘಟಕ ಪ್ರಾರಂಭಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿದರು.

ಮಂಗಸೂಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಆರ್.ಹಿರೇಮಠ ಮಾಹಿತಿ ನೀಡುವಾಗರಾಜ್ಯ ಸಕರ್ಾರದ ಪಂಚಾಯತಿ ಇಲಾಖೆ ವತಿಯಿಂದ ಮಂಗಸೂಳಿ ಗ್ರಾಮ ಆಯ್ಕೆಮಾಡಿ ಯೋಜನೆ ನೀಡಿದ್ದಾರೆ. ಇದು ಯಶಸ್ವಿಗೊಳಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ, ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ, ಕಾಗವಾಡ ಅಧಿಕಾರಿ ಈರಣಗೌಡರ ಎಗಣಗೌಡರ ಸಹಕರಿಸಿದ್ದಾರೆ. ಇವರಿಗೆ ಪಂಚಾಯತಿ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ ಪಾಟೀಲ, ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ ಇವರು ರಾಜ್ಯ ಸಕರ್ಾರ ತಾಲೂಕಿನಲ್ಲಿ ಮಂಗಸೂಳಿ ಗ್ರಾಮ ಆಯ್ಕೆಮಾಡಿ, ಸ್ವಚ್ಛಗ್ರಾಮ ನಿಮರ್ಿಸಲು ನೀಡಿದ ಯೋಜನೆ ಯಶಸ್ವಿಗೊಳಿಸಲು ಎಲ್ಲರು ಸಿದ್ಧರಾಗಿದ್ದೇವೆ. ನಿದರ್ೇಶನ ನೀಡಿದಂತೆ ಗ್ರಾಮಸ್ಥರು ಸಹಕರಿಸಬೇಕೆಂದು ಕರೆ ನೀಡಿ, ಬಕೇಟ್ಗಳನ್ನು ವಿತರಿಸಿದರು.

ತಾಲೂಕಾ ಪಂಚಾಯತಿ ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ಚಿದಾನಂದ ಮಾಳಿ, ಸದಸ್ಯ ಸಂಭಾಜಿ ಪಾಟೀಲ, ಉಪಾಧ್ಯಕ್ಷ ಕಮಲ ಭಾನುಶೆ, ಸದಸ್ಯರಾದ ಸಾವಂತ ಆದೂಕೆ, ಮಲ್ಲಪ್ಪಾ ಮಗದುಮ್, ಅಮೀರ ಶೇಖ್, ಪರಶುರಾಮ ಸಾವಂತ, ಮಹೇಶ ಹರಳೆ, ಚಂದ್ರಕಾಂತಕೆಂಗಾರೆ, ಗೋಪಾಳ ಪಾಟೀಲ, ಧೊಂಡಿರಾಮ ವಾಘಮೋಡೆ, ಶಂಕರ ಮಮದಾಪುರೆ, ಸೇರಿದಂತೆಎಲ್ಲ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.