ಹಾವೇರಿ18: ದ್ವಿತೀಯ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡುವಂತೆ ಆಗ್ರಹಿಸಿ ನಗರದ ಮುನಿಸಿಪಲ್ ಮೈದಾನದಿಂದ ಸಿದ್ದಪ್ಪ ವೃತ್ತದವರೆಗೂ ಮೆರವಣಿಗೆ ಮೂಲಕ ಸಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶ ಬಸವರಾಜ ಭೋವಿ ಮಾತನಾಡಿ ರಾಜ್ಯ ಸರ್ಕಾರ ವಿದ್ಯಾಥರ್ಿಗಳಿಗೆ ನೀಡಬೇಕಾದ ಸರಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಮಾಡುತ್ತಿದ್ದೆ ಇದು ತೀವ್ರ ಖಂಡನೀಯ ಕಳೆದ ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ನೀಡುತ್ತಿತ್ತು ಎಸ್ಎಫ್ಐ ರಾಜ್ಯಾದ್ಯಂತ ಹೋರಾಟ ಮಾಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಡ ಹಾಕಲಾಯಿತು. ಪ್ರಸ್ತುತ ರಾಜ್ಯ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ನೀಡುತ್ತಿದ್ದನು ಸ್ವಾಗತ ಮಾಡುತ್ತೇವೆ. ಅದೇ ರೀತಿ ವಿದ್ಯಾರ್ಥಿಗಳ ಮಧ್ಯ ತಾರತಮ್ಯ ಮಾಡದೇ ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡಬೇಕು. ಈ ವರ್ಷ ಅಂತಿಮ ವರ್ಷದಲ್ಲಿರುವುದರಿಂದ ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೆ ಗುಣಾತ್ಮಕ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುವಂತಾಗಿದ್ದು,ಎರಡೂ ವರ್ಷದ ಅವಧಿಯಲ್ಲಿಯ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ಅತ್ಯಂತ ತ್ವರಿತಗತಿಯಲ್ಲಿ ನ್ಯಾಯಗಿಸಿ ಉನ್ನತ ಶಿಕ್ಷಣಕ್ಕಾಗಿ ಸಹಕಾರಕ್ಕೆ ರಾಜ್ಯಸರ್ಕಾರ ಮುಂದಾಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಸ್ಎಫ್ಐ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದರು.
ಎಸ್ಎಫ್ಐ ಮುಖಂಡರಾದ ಸೃಷ್ಠಿ ನಂದಿ ಮಾತನಾಡಿ 2016-17 ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಹಂಚಲಾಗುತ್ತದೆ ಆದರೆ 2017-18 ಮತ್ತು 2018-19 ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿಲ್ಲ ಸಂಬಂಧಿಸಿದಪಟ್ಟ ಅಧಿಕಾರಿಗಳು ವಿಚಾರಿಸಿದಾಗ ಸರಕಾರದಿಂದ ಬಂದ ತಕ್ಷಣ ನಿಮಗೆ ಕೋಡುತ್ತೇವೆಂದು ಹೇಳುತ್ತಾ ಬಂದಿದ್ದು ಈಗ ಕೇವಲ 2019-20 ನೇ ಸಾಲಿನ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ಹಂಚುತ್ತಿದ್ದು 2017-18 ಮತ್ತು 2018-19 ನೇ ಸಾಲಿನಲ್ಲಿ ಪದವಿಗೆ ಪ್ರವೇಶ ಪಡೆದ ನಾವುಗಳಿಗೆ ಅದರಲ್ಲೂ 2017-18 ರಲ್ಲಿ ಪಡೆದ ವಿದ್ಯಾಥರ್ಿಗಳಾದ ನಮಗೆ ಅನ್ಯಾಯ ಮೋಸ ಮಾಡದೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಗೌಡ ಭರಮಗೌಡ್ರು, ಕೃಷ್ಣ ಕಡಕೋಳ,ರಾಜೇಶ್ವರಿ ಕಡಕೋಳ,ವಿದ್ಯಾ ಎಸ್ ವಿ.ಪ್ರಿಯಾಂಕಾ ಕೆ ವಿ.ಪೂಜಾ ಬಿ ಎಚ್.ಸುಧಾ ಎಫ್ ಡಿ.ಕವಿತಾ,ಲಕ್ಷ್ಮೀ,ರೇಣುಕಾ ಬಿ,ಅನುಷಾ ಬೆಂಗಳೂರು,ವಿಜಯಕುಮಾರ್ ಸಿ ಎಂ.ಈರಣ್ಣ ಎಫ್ ಎಂ.ಮಂಜು ಎಸ್ ಎಚ್.ವೀರೇಶ ಎಮ್ ಬಿ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.