ಲೋಕದರ್ಶನ ವರದಿ
ಕೊಪ್ಪಳ 10: ಸಮಾಜದಲ್ಲಿ ಜಂಗಮ ಸಮಾಜ ಎಲ್ಲಾ ಸಮಾಜಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸಮಾಜ, ಸಮುದಾಯದಲ್ಲಿ ಜಂಗಮ ಸಮುದಾಯದ ಕೊಡುಗೆ ಅಪಾರ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಮರಿಸ್ವಾಮಿ ಬಡಾವಣೆಯ ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ 46ನೇ ಮಾಸಿಕ ಅರಿವು-ಆಚಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಂಗಮ ಸಮಾಜ ದಾಸೋಹ-ಜ್ಞಾನ ದಾಸೋಹ ಸಂಸ್ಕೃತಿಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದೆ ಅದಕ್ಕೆ ಈಗಿನ ವೀರಶೈವ ಮಠಮಾನ್ಯಗಳೇ ಸಾಕ್ಷಿಯಾಗಿದೆ, ಇಂದು ಎಲ್ಲಾ ಸಮಾಜ ಶೈಕ್ಷಣೀಕವಂತರಾಗಬೇಕು ಅಂದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಾನಿಧ್ಯವನ್ನು ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಳ್ಳಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ನಾಗಭೂಷಣ ಆರ್.ಸಾಲಿಮಠ ಹಾಗೂ ಪಿಕಾರ್ಡ್ ಬ್ಯಾಂಕ್ ನೂತನ ನಾಮನಿದರ್ೇಶನ ಸದಸ್ಯ ಗವಿಸಿದ್ದಯ್ಯ ಸಸಿಮಠ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ದಡೇಸೂಗೂರು, ಮಾಜಿ ಶಾಸಕ ಜಿ.ವೀರಪ್ಪ,ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಯ್ಯ ವಕೀಲರು, ಸಂಸದ ಸಂಗಣ್ಣ ಕರಡಿ ಧರ್ಮಪತ್ನಿ ನಿಂಗಮ್ಮ ಸಂಗಣ್ಣ ಕರಡಿ, ಸಿಸಿಐಎಂ ಸದಸ್ಯರಾದ ಡಾ.ಕುಮಾರಸ್ವಾಮಿ ಬಿ.ಹಿರೇಮಠ, ಸಮಾಜದ ಮುಖಂಡರಾದ ಸಿ.ವಿ.ಕಲ್ಮಠ, ವೀರಯ್ಯಸ್ವಾಮಿ ಬೊಮ್ಮನಾಳ, ವಿ.ಎಂ.ಭೂಸನೂರಮಠ ವಕೀಲರು, ಬಾಲಚಂದ್ರಯ್ಯ, ಕೊಟ್ರಬಸಯ್ಯ ಗಿಣಿಗೇರ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.