ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರು 25: ಮಂಡಳ ಪಂಚಾಯ್ತಿಯಿಂದ ಪರವಾನಿಗೆ ಪಡೆದು ನಿಮರ್ಿಸಿದ್ದ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿಮರ್ಾಣಕ್ಕೆ ಮುಂದಾಗಿದ್ದ ಗ್ರಾಮಸ್ಥನೊರ್ವನಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನೊಟೀಸ್ ನಿಡಿದ್ದ ಕಾರ್ಯದಶರ್ಿ ಹಾಗೂ ಪಿಡಿಒಗೆ ಗ್ರಾಪಂಗೆ ಆಗಮಿಸಿದ ಗ್ರಾಮಸ್ಥರು ಚಳಿ ಬಿಡಿಸಿದ ಘಟನೆ ಸೋಮವಾರ ನಡೆದಿದೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಬಡಗಟ್ಟಿ ಗ್ರಾಮದ ನಿವಾಸಿಯಾದ ಗುರುಶಿದ್ದಯ್ಯಾ ಕೇರಿಮಠ ಎಂಬುವವರು ಈಗಾಗಲೇ ಇರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡವನ್ನು ನಿಮರ್ಿಸಲು ಮುಂದಾಗಿದ್ದರು, ಅದೇ ಪ್ರಕಾರ ಕೇರಿಮಠ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ ಸಹ ಕಟ್ಟಡ ಕಟ್ಟಲು ಪರವಾಣಿಗೆ ನೀಡಬೇಕೆಂದು ಅಜರ್ಿಯನ್ನು ಸಹ ಕಳೆದ 2 ತಿಂಗಳ ಹಿಂದೆಯೇ ನೀಡಿದ್ದರೂ. ಆದರೇ ಇಲ್ಲಿಯವರೆಗೆ ಪರವಾನಿಗೆಯ ಕುರಿತು ಅಭಿವೃದ್ಧಿ ಅಧಿಕಾರಿಯಾಗಲಿ ಹಾಗೂ ಕಾರ್ಯದಶರ್ಿಯಾಗಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಪರಿಣಾಮ ಕೇರಿಮಠ ತಮ್ಮ ಕಟ್ಟಡದ ಕಾಮಗಾರಿಯನ್ನು ಆರಂಭಿಸಿದರು. ನಂತರ ಇದಕ್ಕೆ ತಕರಾರು ಮಾಡಿದ ಅಧಿಕಾರಿಗಳು ಕಟ್ಟಡದ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ನೊಟೀಸ್ ಜಾರಿ ಮಾಡಿದ್ದಾರೆಂದು ಗುರುಶಿದ್ದಯ್ಯಾ ಕೇರಿಮಠ ಆಕ್ರೋಷ ವ್ಯಕ್ತ ಪಡಿಸಿದ ಅವರು, ಕಟ್ಟಡದ ಕಾಮಗಾರಿಯನ್ನು ಆರಂಭಿಸುವಾಗ ಗ್ರಾಮ ಪಂಚಾಯ್ತಿಯ ಸದಸ್ಯರೊಬ್ಬರೂ ಸಹ ಆಗಮಿಸಿದ್ದರು, ಅಲ್ಲದೆ ಪಂಚಾಯ್ತಿಗೆ ಹೊಂದಿಕೊಂಡೆ ಇರುವ ನಿವೇಶನದಲ್ಲಿ ಕಾಮಗಾರಿ ನಡೆದರು ಕುರುಡರಂತೆ ಇವರು ಏಕೆ ವತರ್ಿಸಿದ್ದಾರೆ?, ಸದಸ್ಯರೊಬ್ಬರ ಮಾತು ಕೇಳಿ ಈ ನೊಟೀಸ್ ನೀಡಲಾಗಿದೆ ಎಂದು ಪಿಡಿಓ ಹೇಳುತ್ತಾರೆ, ಭೂಮಿ ಪೂಜೆ ವೇಳೆಯಲ್ಲಿ ಈ ಕಾಮಗಾರಿಯನ್ನು ಅಧಿಕಾರಿಗಳು ಏಕೆ ಸ್ಥಗಿತಗೊಳಿಸಲಿಲ್ಲ ಎಂದು ಪಂಚಾಯ್ತಿ ಆಡಳಿತ ವಿರುದ್ಧ ಕೇರಿಮಠ ಹಾಗೂ ಗ್ರಾಮಸ್ಥರು ಹರಿಹಾಯ್ದರು.
ಮುಖಂಡ ಹಾಗೂ ಸಮಾಜ ಸೇವಕ ಹಬೀಬ ಶಿಲೇದಾರ ಮಾತನಾಡಿ, 1972 ರಲ್ಲಿ ಮಂಡಳ ಪಂಚಾಯ್ತಿ ಆಳಿತದಲ್ಲಿರುವಾಗಲೇ ಗುರುಶಿದ್ದಯ್ಯಾ ಕೇರಿಮಠ ಅವರಿಗೆ ನಿವೇಶನ ನಿಡಿದ್ದಾರೆ, ಅಲ್ಲಿ ಅವರು ಮನೆ ನಿಮರ್ಿಸಿದ್ದರು ಅನಂತರ ಅಲ್ಲಿ ಗ್ರಾಪಂ ಪರವಾನಿಗೆ ಪಡೆದು ಹೊಟೇಲ್ ತೆರದಿದ್ದರು, ಆದರೇ ಈ ಭಾರಿ ಅತಿಯಾದ ಮಳೆಯಾದ ಕಾರಣದಿಂದ ಗೋಡೆಗಳು ಶಿಥಿಲಗೊಂಡಿದ್ದವು ಕಾರಣ ಈ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿಮರ್ಿಸಲು ಹೊರಟರೆ ಯಾವುದೋ ದುರುದ್ದೇಶದಿಂದ ಪಂಚಾಯ್ತಿಯವರು ಇಲ್ಲಸಲ್ಲದ ತಕರಾರು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, ಗ್ರಾಪಂಗೆ ಹಕ್ಕು ಪತ್ರ ಪಡೆಯುವ ಹಾಗೂ ವಿತರಿಸುವ ಹಕ್ಕು ಇಲ್ಲವೆಂದ ವಾದಿಸುತ್ತಾರೆ, ಹಿಂದೆ ನಡೆದ ವ್ಯವಹಾರಗಳನ್ನು ಪುನರ್ ಪರಿಶಿಲಿಸುವದಾಗಿ ಹೇಳುತ್ತಾರೆ ಹಕ್ಕು ಪತ್ರ ಪಡೆದ ಸುಮಾರು 500 ಬಡವರು ಈಗಾಗಲೇ ಮನೆಗಳನ್ನು ನಿಮರ್ಿಸಿಕೊಂಡಿದ್ದಾರೆ ಹಾಗಾದರೆ ಎಲ್ಲ ಮನೆಗಳನ್ನು ಪಿಡಿಓ ಕೆಡವಿ ಹಾಕುತ್ತಾರೊ ? ಎಂದು ಪ್ರಶ್ನಿಸಿದರು.