ಲೋಕದರ್ಶನವರದಿ
ಹಾವೇರಿ : ದಾವಣಗೆರೆ ಜಿಲ್ಲೆಯ ಕೊಡಗನೂರಿನ ಹತ್ತಿರ ದಿ.20 ರಂದು ಅಪಘಾತದಲ್ಲಿ ಮೃತಪಟ್ಟ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಆಪೆ ಆಟೋದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವ ರೀತಿ ನಾಗರೀಕ ಸಮಾಜ ತಲೆ ತಗ್ಗುವಂತೆ ಮಾಡಿದೆಯಲ್ಲದೆ ಮಾನವೀಯ ಮನುಷ್ಯರ ಹೃದಯ ಕದಡಿದೆ. ಈ ಘಟನೆ ಅತ್ಯಂತ ನೋವಿನ, ನಾಚಿಕೆಗೇಡಿನ ಅಮಾನವೀಯ ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಢರೇಷನ್ (ಡಿವೈಎಫ್ಐ) ತೀವ್ರವಾಗಿ ಖಂಡಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದಶರ್ಿ ಬಸವರಾಜ ಪೂಜಾರ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಡಿವೈಎಫ್ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಾವೇರಿಯ ತಹಶೀಲ್ದಾರರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಮನವಿ ಸಲ್ಲಿಸದರು.ಎರಡು ವರ್ಷದ ಹಿಂದೆ ಹೀಗೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಪೋತರಾಜ್ ಅವರ ಶವವನ್ನು ಲಾರಿಯಲ್ಲಿ ಸಾಗಿಸಿದ್ದು ತಲೆತಗ್ಗಿಸುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದದ್ದು ಕಳವಳಕಾರಿ ಸಂಗತಿ. ಇಬ್ಬರು ಪತ್ರಕರ್ತರ ಸಾವಿನ ಸಂದರ್ಭದ ಘಟನೆಗಳು ಪತ್ರಕರ್ತರ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ಸಾವು, ಒಂದು ಗೌರವ, ಘನತೆ ಬಯಸುತ್ತದೆ. ಸಾವನ್ನು ಅವಮಾನಿಸಿದ ಹೃದಯಹೀನ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಮತ್ತು ಮುಂದೆ ಯಾವುದೇ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಗೃಹ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಿ ಜಾರಿಗೆ ತರಬೇಕು ಎಂದು ಹೇಳಿದರು.
ಸರಕಾರ ಮೃತ ಪತ್ರಕರ್ತ ಮಂಜುನಾಥ ಸಾವಿನ ಹಿನ್ನೆಲೆಯಲ್ಲಿ ಐದು ಲಕ್ಷ ರೂಪಾಯಿ ಘೋಷಿಸಿರುವುದು ಸರಿಯಷ್ಟೆ, ಆದರೆ ಈ ಮೊತ್ತವನ್ನು ಕನಿಷ್ಠ 15ಲಕ್ಷಕ್ಕೆ ಹೆಚ್ಚಿಸಬೇಕು. ಆ ಮೂಲಕ ಅವರ ಅವಲಂಬಿತ ಕುಟುಂಬಕ್ಕೆ ಸರಕಾರ ಆಸರೆ ನೀಡಬೇಕು ಎಂದರು.
ಪತ್ರಕರ್ತರ ಜೀವನಕ್ಕೆ ಸಾಮಾಜಿಕ ಭದ್ರತೆಯಿಲ್ಲದೇ ಸದಾ ಒತ್ತಡದಲ್ಲಿಯೇ ಬದುಕುವ ಸ್ಥಿತಿ ಒಂದೆಡೆಯಾದರೆ, ಹಲ್ಲೆ, ದೌರ್ಜನ್ಯ ಹಾಗೂ ಜೀವಬೆದರಿಕೆಗಳನ್ನು ದಿನನಿತ್ಯ ಎದುರಿಸಿ ಬದುಕಬೇಕಾದ ಪರಿಸ್ಥಿತಿ ಇದೆ. ಮಾಧ್ಯಮವು ಉದ್ಯಮವಾಗಿ ಬೆಳೆದಿರುವ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಅನಾರೋಗ್ಯಕ್ಕೀಡಾದರೇ ಉತ್ತಮ ಆರೋಗ್ಯ ಸೌಲಭ್ಯ ದೊರಕದ ಕೆಟ್ಟ ಪರಿಸ್ಥಿತಿ ಇದೆ. ಈ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಪತ್ರಕರ್ತರಿಗೆ ಅವಕಾಶವಿತ್ತು. ಈಗ ಅದೂ ಕೂಡ ಇಲ್ಲ. ಕೂಡಲೇ ಸರಕಾರ ಪತ್ರಕರ್ತರ ಆರೋಗ್ಯ ಸೌಲಭ್ಯಕ್ಕಾಗಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಪತ್ರಕರ್ತರಿಗೆ ಇನ್ನು ನಿವೃತ್ತಿ ವೇತನ ಇಲ್ಲವೇ ಇಲ್ಲ ಜೀವನ ಪೂತರ್ಿ ದುಡಿದು ಮುಪ್ಪಿನಲ್ಲಿ ಬರಿಗೈಲಿ ಮನೆಗೆ ಹೋಗುವ ಚಿಂತಾಜನಕ ಸ್ಥಿತಿಯಿದ್ದು ಮಾದ್ಯಮ ರಂಗದಲ್ಲಿ ಕೆಲಸ ಮಾಡುವವರಿಗೆ ಸರಕಾರ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಹೇಳಿದರು.
ಮಹಿಳಾ ಪತ್ರಕತರ್ೆಯರ ಸ್ಥಿತಿಯಂತೂ ಇನ್ನೂ ಘೋರವಾದುದು. ಮಾದ್ಯಮದಲ್ಲಿ ಕೆಲಸ ಮಾಡುವ ಪತ್ರಕತರ್ೆಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ಸೌಲಭ್ಯ, (ಸಣ್ಣ ಮಕ್ಕಳಿರುವ ಪತ್ರಕತರ್ೆಯರಿಗೆ ಕನಿಷ್ಠ ಎದೆ ಹಾಲುಡಿಸಲು ಪ್ರತ್ಯೇಕ ಕೊಠಡಿಗಳಿಲ್ಲ), ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಡ್ರಾಪಿಂಗ್ ವ್ಯವಸ್ಥೆಯಿಲ್ಲದೇ ಕೆಲಸ ಬಿಟ್ಟ ಪತ್ರಕತರ್ೆಯರೂ ಇದ್ದಾರೆ. ಅಭದ್ರತೆಯಲ್ಲಿ ಕೆಲಸ ಮಾಡುವ ಮಹಿಳಾ ವರದಿಗಾರರೂ ಮಾನಸಿಕ ತೊಳಲಾಟದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿಯಿರುವುದು ಖೇದಕರ. ಲಿಂಗ ತಾರತಮ್ಯ ರಹಿತ ವಾತಾವರಣ ನಿಮರ್ಿಸಲು ಹಾಗೂ ಮಹಿಳಾ ಪತ್ರಕರ್ತರ ಸಮಸ್ಯೆ ಪರಿಹರಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಶೋಷಣೆಗೊಳಪಡುತ್ತಿದ್ದಾರಲ್ಲದೇ ಘನತೆಯ ಬದುಕನ್ನು ಬದುಕಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಿಕರಿಗೆ ಘನತೆಯ ಬದುಕು ಹಾಗೂ ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಎಪ್ಐ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೊವಿ,ಡಿವೈಎಫ್ಐ ಮುಖಂಡರುಗಳಾದ ಮಹೇಶ ನರೆಗಲ್, ನಾಗರಾಜ ಪವಾಡಿ, ಹನಮಂತಗೌ ಎನ್.ಬಿ ಅನೇಕರಿದ್ದರು.