ಗಾಂಧಿ ಭವನದ ಉದ್ಘಾಟನೆಗೆ ಜಿಲ್ಲಾಧಿಕಾರಿಗಳಿಂದ ಭರವಸೆ

Promise from District Collector for inauguration of Gandhi Bhawan

ಗಾಂಧಿ ಭವನದ ಉದ್ಘಾಟನೆಗೆ ಜಿಲ್ಲಾಧಿಕಾರಿಗಳಿಂದ ಭರವಸೆ 

ಧಾರವಾಡ 31:  ಧಾರವಾಡ ನಗರದ ಹೊಸಬಸ್ಟ್ಯಾಂಡ ಹಿಂಭಾಗದಲ್ಲಿ ನಿರ್ಮಿಸಿರುವ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ, ಗಾಂಧಿ ಭವನದ ಉದ್ಘಾಟನೆ ವಿಳಂಬವನ್ನು ಖಂಡಿಸಿ ದಿನಾಂಕ: 30-1-2025 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ನಿರಂತರ ಧರಣಿ ಸತ್ಯಗ್ರಹಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ಇಂದು ಬೆಳಿಗ್ಗೆ ಗಾಂಧಿ ಭವನ ವೀಕ್ಷಣೆ ಮಾಡಿ ಸತ್ಯಾಗ್ರಹ ನಿರತರನ್ನು ಕಚೇರಿಗೆ ಆಹ್ವಾನಿಸಿ ಮಾರ್ಚ 15 ರೊಳಗಾಗಿ ಉದ್ಘಾಟನೆ ಮಾಡುತ್ತೇವೆಂದು ಭರವಸೆ ನೀಡಿದ ಮೇರೆಗೆ ಮಾರ್ಚ 15 ರವರೆಗೆ  ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ.  

ಒಂದು ವೇಳೆ ನಿಗದಿತ ದಿನಾಂಕಕ್ಕೆ ಗಾಂಧಿ ಭವನ ಉದ್ಘಾಟನೆ ಆಗದಿದ್ದಲ್ಲಿ ಮತ್ತೆ ನಿರಂತರ ಧರಣಿ ಯನ್ನು ಪುನಃ ಮುಂದುವರೆಸಲಾಗುವುದು ಎಂದು ಶ್ರೀಶೈಲಗೌಡ ಕಮತರ ತಿಳಿಸಿದ್ದಾರೆ.