ಕೊಪ್ಪಳ 07: ಬೆಳೆ ಕಟಾವುಯಡಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಕೈಗೊಳ್ಳದಿದ್ದಲ್ಲಿ ಮತ್ತು ನಷ್ಟಗೊಳಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಜಿಲ್ಲೆಯ ಗ್ರಾ.ಪಂ. ಪಿಡಿಓ, ತಾ.ಪಂ. ಇಓ., ತಹಶೀಲ್ದಾರ, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ಕಟಾವು ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರದಂದು ಆಯೋಜಿಸಲಾದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕಾಗಿ "ಬೆಳೆ ದರ್ಶಕ ಆ್ಯಪ್ ಇದೆ. ಇದರ ಉದ್ದೇಶಗಳು ಮೊದಲಿಗೆ ರೈತರಿಗೆ ತಿಳಿಸಬೇಕು. ಬೆಳೆ ನಷ್ಟ, ಕಟಾವು ಇತ್ಯಾದಿ ಕುರಿತು ಕೆಲ ಅಧಿಕಾರಿಗಳು ಅಂದಾಜು ಪಟ್ಟಿಯನ್ನು ನೀಡುತ್ತಿದ್ದಾರೆ. ಬೆಳೆ ನಷ್ಟವಾಗಿದ್ದಲ್ಲಿ ಸವರ್ೆ ಮಾಡಿ ಪಟ್ಟಿ ತಯಾರಿಸಬೇಕು. ಯಾವುದೇ ಸಮಸ್ಯೆಗಳೊಂದಿಗೆ ರೈತರು ಕರೆ ಮಾಡಿದಾಗ ಅದಕ್ಕೆ ಶೀಘ್ರ ಸ್ಪಂಧಿಸಬೇಕು. ಈ ಕುರಿತು ಕೃಷಿ ಇಲಾಖೆ ಮತ್ತು ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ರೈತರ ಕರೆಗಳಿಗೆ ಸ್ಪಂಧಿಸದಿರುವವರ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿಗಳ ಕಾಯರ್ಾಲಯಕ್ಕೆ ಸಲ್ಲಿಸಿ. ಅಲ್ಲದೇ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದರ ಕುರಿತು ಹೋಬಳಿವಾರು ಪರಿಶೀಲಿಸಲಾಗುವುದು. ನೀರ್ಲಕ್ಷ್ಯತನ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಳೆ ಕಟಾವು ನಮೂನೆ-1 ರಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು. ಮೂಲ ಕಾರ್ಯಕರ್ತರು ಕಡ್ಡಾಯವಾಗಿ ಬೆಳೆ ಕಟಾವಿನ ಸಮೀಕ್ಷೆಗೆ ಹೋಗಬೇಕು. ಸಮೀಕ್ಷೆಗೆ ನಿಗದಿ ಪಡಿಸಿದ ಬೆಳೆಗಳ ಮೇಲೆ ಸಮೀಕ್ಷೆಯನ್ನು ಮಾಡಬೇಕು. ಯಾವುದೇ ಬದಲಾವಣೆ ಮಾಡುವಂತಿಲ್ಲ. ಒಂದು ವೇಳೆ ಹಂಚಿಕೆಯಾದ ವಿಮಾ ಘಟಕದಲ್ಲಿ ಬೆಳೆ ಬಿತ್ತನೆ ಯಾಗಿರದೇ ಇದ್ದಲ್ಲಿ, ಸಂಬಂಧಿಸಿದ ತಾಲೂಕಿನ ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ನಿದರ್ೇಶಕರಿಂದ ದೃಢೀಕರಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ರೈತರ ಜೊತೆ ಸಂಪರ್ಕವಿರಿಸಿಕೊಂಡು ನಿಗದಿತ ಅವಧಿಯೊಳಗೆ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರ್ರಾಜಾ ಅವರು ಮಾತನಾಡಿ, ಬೆಳೆ ಸಮೀಕ್ಷೆ, ನಷ್ಟ ಪರಿಹಾರ ನೀಡುವ ಪ್ರಕ್ರೀಯೆಗಳಲ್ಲಿ ತಡವಾದರೆ ರೈತರಿಗೆ ತುಂಬಾ ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫಸಲ್ ಭಿಮಾ ಯೋಜನೆಯಡಿ ವಿಶ್ವಾಸ ಕಡಿಮೆ ಯಾಗುತ್ತಿದ್ದೆ ಇದ್ದಕ್ಕೆ ಯಾರು ಹೋಣೆ. ನಮಗೆ ಸೌಭಾಗ್ಯ ಸಿಕ್ಕಿದ್ದು, ನಾವೇಲ್ಲರು ನೌಕರರಾಗಿದ್ದೇವೆ. ಇದರಿಂದ ನಮಗೆ ಪ್ರತಿ ತಿಂಗಳು ವೇತನ ದೊರೆಯುತ್ತಿದೆ. ಅನ್ನದಾತರಿಗೆ ನಿಧರ್ಿಷ್ಠ ವೇತನ ಇಲ್ಲ. ಅವರು ಬೆಳೆದ ಬೆಳೆಗೆ ಸಿಗುವ ಬೆಲೆಯೇ ಅವರ ವೇತನ. ಸಕರ್ಾರವು ನೀಡುವ ಬೇಂಬಲ ಬೆಲೆ, ಬೆಳೆ ನಷ್ಟ ಪರಿಹಾರಗಳಂತಹ ಸೌಲಭ್ಯಗಳು ಸದುಪಯೋಗವಾಗಬೇಕಾದರೆ ನಿಗದಿತ ಅವಧಿಯೊಳಗೆ ಸಕರ್ಾರದ ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಳ್ಳಬೇಕು. ಆದ್ದರಿಂದ ಎಲ್ಲಾ ಅಧಿಕಾರಿಗಳು ಈ ವಿಚಾರಗಳನ್ನು ಸೂಕ್ಷ್ಮವಾಗಿ ನೋಡಿ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಅವರು ಮಾತನಾಡಿ, ಬೆಳೆ ಕಟಾವು ನಮೂನೆ-1 ರಲ್ಲಿ ಕೈಗೊಳ್ಳುವ ಸಂದರ್ಭದಲ್ಲಿ ಪ್ರತಿ ಪ್ರಯೋಗಕ್ಕೆ ಕನಿಷ್ಠ ಐದು ಸವರ್ೆ ನಂಬರಗಳನ್ನು ದಾಖಲಿಸಬೇಕು. ಯಾವುದೇ ಬೆಳೆ ಕಟಾವು ಪ್ರಯೋಗಗಳನ್ನು ಮಾನವಾಧಾರಿತ ಪದ್ಧತಿಯಲ್ಲಿ ಕೈಗೊಳ್ಳಲು ಅವಕಾಶವಿಲ್ಲ. ಬೆಳೆ ಲಭ್ಯವಿಲ್ಲದ ಪಕ್ಷದಲ್ಲಿ ಮಾತ್ರ ಈ ಮಾಹಿತಿಯನ್ನು ಸಂರಕ್ಷಣೆ ವೆಬ್ಸೈಟ್ ನಲ್ಲಿ ಲಭ್ಯವಿರುವ ಬೆಳೆವಾರು ವಿಮಾ ಕಂತು ಪಾವತಿಸಿದ ರೈತರ ಮಾಹಿತಿಯೊಂದಿಗೆ ತಾಳೆ ನೋಡಿ ಸಂಬಂಧಿಸಿದ ಹೋಬಳಿ ಅಥವಾ ಗ್ರಾ.ಪಂ. ಮಟ್ಟದಲ್ಲಿ ಅಧಿಕಾರಿಗಳು ನೀಡಿದ ಪ್ರಮಾಣ ಪತ್ರಗಳನ್ನು ತಾಲೂಕಿನ ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ದೃಢೀಕರಿಸಿದ ನಂತರವೇ ಪ್ರಯೋಗಗಳನ್ನು ನಷ್ಟಗೊಳಿಸಬಹುದಾಗಿದೆ. ಬೆಳೆ ಕಟಾವು ಪ್ರಯೋಗಗಳನ್ನು ನಮೂನೆ-1 ರಲ್ಲಿ ನಿಗದಿಪಡಿಸಿದ ದಿನಾಂಕದಂದೇ ಕೈಗೊಲ್ಳುವುದು ಕಡ್ಡಾಯವಾಗಿರುವುದರಿಂದ ಆಗಾಗ ನಮೂನೆ-1 ರಲ್ಲಿ ನೀಡಲಾದ ನಿರೀಕ್ಷಿತ ಕಟಾವು ದಿನಾಂಕವನ್ನು ಸಂಬಂಧಿಸಿದ ರೈತರಿಂದ ಪಡೆದು ನಮೂನೆ-1 ರಲ್ಲಿ ದಿನಾಂಕವನ್ನು ಅಪ್ಡೇಟ್ ಮಾಡಬೇಕು. ಅಪ್ಲೋಡ್ ಮಾಡಲಾದ ನಮೂನೆ-1 ಮತ್ತು 2 ಗಳಲ್ಲಿ ಇಳುವರಿ ಮಾಹಿತಿಯನ್ನು ಯಾವುದೇ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ಮೂಲಕ ಕಾರ್ಯಕರ್ತರು ಇಳುವರಿ, ಬೆಳೆ ಪ್ರತಿಶತ, ಬೆಳೆಯ ತಳಿ, ನೀರಾವರಿಯ ಮೂಲ ಇತ್ಯಾದಿಗಲನ್ನು ದಾಖಲಿಸುವಾಗ ಜಾಗರೂಕತೆಯಿಂದ ದಾಖಲಿಸಬೇಕು. ಸಮೀಕ್ಷೆಯ ಸಮಯದಲ್ಲಿ ನಾಲ್ಕು ಪೋಟೋ ತೆಗೆಯುವುದು ಕಡ್ಡಾಯ ಮತ್ತು 20 ಸೇಕೆಂಡ್ ವಿಡಿಯೋ ಕಡ್ಡಾಯವಾಗಿರುತ್ತದೆ. ಈಗಾಗಲೇ ನಮೂನೆ-1 ರಲ್ಲಿ ಮಾಹಿತಿಯನ್ನು ನೀಡಲಾದ ಮೋಬೈಲ್ ತಂತ್ರಾಂಶದಲ್ಲಿ ಕಾಣಿಸಲಾದ ಸವರ್ೆ ನಂಬರಿನ ರೈತರು ಬೆಳೆ ಕಟಾವು ಮಾಡುವ ಒಂದು ದಿನ ಮುಂಚಿತವಾಗಿ ಸಮೀಕ್ಷಾ ಅಧಿಕಾರಿಗಳಿ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಕೃಷಿ ಇಲಾಖೆ ಜಂಟಿ ಕೃಷಿ ನಿದರ್ೇಶಕರಾದ ಶಬಾನ ಶೇಖ್, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಜಿಲ್ಲೆಯ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು, ಗ್ರಾ.ಪಂ. ಪಿಡಿಓ, ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.